ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ತಮಿಳುನಾಡಿನ ಕಚ್ಚತೀವು ದ್ವೀಪವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ #Indira Gandhi ಅವರು ಶ್ರೀಲಂಕಾಗೆ ನೀಡಿದ್ದ ವಿವಾದದ ಬೆನ್ನಲ್ಲೇ ಜವಹರ ಲಾಲ್ ನೆಹರೂ #Jawaharlal Nehru ಮಾಡಿದ ಒಂದು ನಿರ್ಲಕ್ಷದ ಪರಿಣಾಮ ಬೃಹತ್ ಬಂದರೊಂದು ಪಾಕಿಸ್ಥಾನದ ಪಾಲಾಗಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಈ ಕುರಿತಂತೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, 50ರ ದಶಕದಲ್ಲಿ ನೆಹರೂ ಅವರ ಒಂದು ನಿರ್ಲಕ್ಷದ ನಿರ್ಧಾರ ಗ್ವದಾರ್ ಬಂದರು ಪಾಕಿಸ್ಥಾನದ ಪಾಲಾಯಿತು ಎಂದು ವರದಿಯಾಗಿದೆ.
ಲೋಕಸಭೆ ಚುನಾವಣೆಯ ವೇಳೆ, 1970 ರ ದಶಕದಲ್ಲಿ ಆಯಕಟ್ಟಿನ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸುವ ನಿರ್ಧಾರದ ಬಗ್ಗೆ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತ್ತು. ಕಾಂಗ್ರೆಸ್ ಪಕ್ಷವು ದೇಶದ ಸಮಗ್ರತೆ ಮತ್ತು ಹಿತಾಸಕ್ತಿಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದೆ.
1783ರಿಂದ ಒಮನ್ ಸುಲ್ತಾನ್ ಹಿಡಿತದಲ್ಲಿದ್ದ ಗ್ವಾದರನ್ನು 1950ರಲ್ಲಿ ಒಮನ್ ಮಾರಾಟಕ್ಕೆ ಮುಂದಾಯಿತು. ಒಮನ್ ಮೊದಲು ಭಾರತದ ಪ್ರಧಾನಿ ಜವಾಹರ ಲಾಲ್ ನೆಹರೂ ಅವರನ್ನು ಸಂಪರ್ಕಿಸಿ ಈ ಬಂದರು ನೆಲೆ ಖರೀದಿಸುವಂತೆ ಅವಕಾಶ ನೀಡಿದ್ದರು. ಆದರೆ ಈ ಬಂದರು ನಮಗ್ಯಾಕೆ ಎಂದು ನೆಹರೂ ಆಫರನ್ನು ತಿರಸ್ಕರಿಸಿದ್ದರು ಎಂದು ವರದಿಯಾಗಿದೆ. ಅಂತಿಮವಾಗಿ ಭಾರತ ಈ ಬಂದರನ್ನು ಖರೀದಿಸಲಿಲ್ಲ. ಭಾರತದ ಮನಸ್ಸು ಬದಲಾಯಿಸಿ ಈ ಬಂದರು ನೆಲೆಯನ್ನು ಖರೀದಿಸಬಹುದು ಎಂದು ಕಾದ ಒಮನ್ ಸುಲ್ತಾನ್’ಗೆ ಭಾರತದಿಂದ ಯಾವುದೇ ಸ್ಪಂದನೆ ಸಿಗಲಿಲ್ಲ ಎಂದು ವರದಿಯಾಗಿದೆ.
1958ರಲ್ಲಿ ಅಂದರೆ ಭಾರತಕ್ಕೆ ಈ ಗ್ವಾದರ್ ಖರೀದಿಗೆ ಅವಕಾಶ ನೀಡಿ 8 ವರ್ಷಗಳ ಬಳಿಕ ಪಾಕಿಸ್ತಾನ ಈ ಗ್ವಾದರ್ ಖರೀದಿಸಿತು. ಭಾರತದ ಆರ್ಥಿಕ ನೆರವಿನಲ್ಲಿ ಉಸಿರಾಡುತ್ತಿದ್ದ ಪಾಕಿಸ್ಥಾನ ಈ ಬಂದರು ಖರೀದಿಸಿ ಐತಿಹಾಸಿಕ ಹಾಗೂ ಅತ್ಯಂತ ಮಹತ್ವದ ಹೆಜ್ಜೆ ಇಟ್ಟಿತ್ತು.
ರಾಜಕೀಯ ಇಚ್ಚಾಶಕ್ತಿ ಹಾಗೂ ದೂರದೃಷ್ಟಿಯ ಕೊರತೆಯಿಂದ ಭಾರತ ಈ ಬಂದರು ನೆಲೆಯನ್ನು ಕಳೆದುಕೊಂಡಿತ್ತು ಎಂಬ ಆರೋಪ ಇದೀಗ ಭುಗಿಲೆದ್ದಿದೆ.
ಯಾವುದೀ ಬಂದರು?
ಸದ್ಯ ಗ್ವಾದಾರ್ #Gwadar ಪಾಕಿಸ್ಥಾನದ 3ನೇ ಅತಿ ದೊಡ್ಡ ಬಂದರಾಗಿದ್ದು, ಇದನ್ನು ಚೀನಾ ಸಹ ಬಳಕೆ ಮಾಡಿಕೊಳ್ಳುತ್ತಿದೆ. ಪ್ರಮುಖವಾಗಿ, ಪಾಕಿಸ್ತಾನ ಹಾಗೂ ಚೀನಾ ಮೀನುಗಾರರು, ವ್ಯಾಪಾರ ವಹಿವಾಟುಗಳು ಸೂಸೂತ್ರವಾಗಿ ನಡೆಯುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post