ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ತಮ್ಮ ವಿರುದ್ಧ ಅವಿಶ್ವಾಸ ಮಂಡಿಸಲು ಮುಂದಾಗಿರುವ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ PMNarendraModi ನಗುನಗುತ್ತಲೇ ಚಾಟಿ ಬೀಸಿ ಬೆವರಿಳಿಸಿದ್ದಾರೆ.
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಉತ್ತರ ನೀಡಿರುವ ಪ್ರಧಾನಿಯವರು ಕಾಂಗ್ರೆಸ್ ಹಾಗೂ ಇಂಡಿಯಾ ಕೂಟದ ವಿರುದ್ದ ಬರೋಬ್ಬರಿ 2 ಗಂಟೆಗೂ ಅಧಿಕ ವೇಳೆ ಅವರು ಮಾತನಾಡಿದರು.
ವಿಪಕ್ಷಗಳಿಗೆ ಐದು ವರ್ಷ ಸಮಯ ನೀಡಿದ್ದೆ, ಆದರೆ ಅವರು ಸರಿಯಾಗಿ ತಯಾರಿ ಮಾಡಿಕೊಂಡು ಬಂದಿರಲಿಲ್ಲ. ವಿಪಕ್ಷಗಳು ಫೀಲ್ಡ್ ಸೆಟ್ ಮಾಡಿದ್ದರು. ಆದರೆ ನಮ್ಮ ಸಂಸದರು ಸಿಕ್ಸರ್, ಬೌಂಡರಿ ಸಿಡಿಸಿದರು. ಅವರು ನೋ ಬಾಲ್ ಎಸೆಯುತ್ತಲೇ ಇದ್ದರು. ನಾವು ಸೆಂಚುರಿ ಸಿಡಿಸಿದೆವು. ಪ್ರತಿಪಕ್ಷಗಳಿಗೆ ಪಾಕಿಸ್ತಾನದ ಮೇಲೆ ವಿಶ್ವಾಸವಿದೆ. ಆದರೆ ಭಾರತೀಯ ಸೇನೆ ಮೇಲೆ ವಿಶ್ವಾಸವಿಲ್ಲ. ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು INDIAದಲ್ಲಿ ಎರಡು ‘ಐ’ಗಳನ್ನು ಸೇರಿಸಿದೆ. ಇಂಡಿಯಾ ಮೈತ್ರಿಯು ‘ಘಮಾಂಡಿಯ’ ಮೈತ್ರಿಯಾಗಿದ್ದು, ಪ್ರತಿಯೊಬ್ಬರೂ ಅದರ ಲಾಭ ಪಡೆಯಲು ಬಯಸುತ್ತಾರೆ ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಕೇವಲ ಪಕ್ಷದ ಬಗ್ಗೆ ಯೋಚಿಸುತ್ತಾರೆ, ದೇಶದ ಬಗ್ಗೆ ಯೋಚಿಸಲ್ಲ. ದೇಶಕ್ಕೆ ಜೈಕಾರ ಹಾಕೋದನ್ನು ಇವರು ಸಹಿಸುವುದಿಲ್ಲ. ನಾಲ್ಕು ದಿಕ್ಕೂಗಳಲ್ಲೂ ದೇಶದ ಬಗ್ಗೆ ಜೈಕಾರ ಹಾಕುತ್ತಿದ್ದಾರೆ. ಆದರೆ ವಿಪಕ್ಷ ಸದಸ್ಯರು ಕಪ್ಪು ಬಟ್ಟೆ ಧರಿಸಿ ಸಂಸತ್ಗೆ ಆಗಮಿಸಿದ್ದಾರೆ ಎಂದರು.
2028 ರಲ್ಲೂ ನನ್ನ ವಿರುದ್ಧ ಮತ್ತೊಂದು ಅವಿಶ್ವಾಸ ನಿರ್ಣಯ ಮಂಡಿಸುತ್ತಾರೆ ಎಂದು ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯವಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post