ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ #PM Narendra Modi ನೇತೃತ್ವದ ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಮಂಡನೆಗೆ ಸಿದ್ದವಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸೀರೆ ಇಂದು ದೇಶದ ಗಮನ ಸೆಳೆದಿದೆ.
ಸಚಿವೆ ನಿರ್ಮಲಾ ಸೀತಾರಾಮನ್ #Minister Nirmala Sitharaman ಅವರು ಪ್ರತಿ ಬಾರಿಯಂತೆ ಈ ಬಾರಿಯೂ ಭಾರತದ ಸಾಂಪ್ರದಾಯಿಕ ಕೈಮಗ್ಗ ನೇಕಾರಿಕೆಯನ್ನು ಪ್ರೋತ್ಸಾಹಿಸಲು ಈ ಸೀರೆಯನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷವಾಗಿದೆ.
ಕೆನ್ನೇರಳೆ ಬಣ್ಣದ ಸೀರೆ ಉಟ್ಟಿರುವ ನಿರ್ಮಲಾ ಸೀತಾರಾಮನ್ ಅವರು ಇಂದು ಭಾರೀ ಗಮನ ಸೆಳೆದಿದ್ದು, ಇದಕ್ಕೆ ಕಂದು ಬಣ್ಣದ ಅಂಚು ಹೊಂದಿದೆ.
ಗಾಢ ಕೆನ್ನೇರಳೆ ಬಣ್ಣದ ಸೀರೆಗೆ ಚಿನ್ನದ ಬಣ್ಣ ಮತ್ತು ಕಂದು ಬಣ್ಣದ ಅಂಚುಗಳಿವೆ ಸೆರಗಿನ ಭಾಗದಲ್ಲಿ ಸಾಂಪ್ರದಾಯಿಕ ಸಾಸಿವೆ ಬಣ್ಣದ ಪಟ್ಟಿಯಿದೆ.
ಪ್ರತಿ ಬಾರಿಯೂ ಬಜೆಟ್ ದಿನ ನಿರ್ಮಲಾ ಸೀತಾರಾಮನ್ ಅವರು ಧರಿಸುವ ಸೀರೆ ಟ್ರೆಂಡ್ ಆಗುತ್ತದೆ. ವಿಭಿನ್ನ ಸೀರೆಗಳನ್ನು ಉಟ್ಟುಕೊಂಡು ಬರುವ ಮೂಲಕ ನಿರ್ಮಲಾ ಅವರು ದೇಶದ ಜನತೆಯ ಗಮನ ಸೆಳೆಯುತ್ತಾರೆ.
2023ರ ಲ್ಲಿ ಕಪ್ಪು ಬಣ್ಣದ ಬಾರ್ಡರ್ ಇರುವ ಕೆಂಪು ಬಣ್ಣದ ಇಳಕಲ್ ಸೀರೆ (ಕರ್ನಾಟಕದ ಕಸೂತಿ ಕಲೆ) ಧರಿಸಿದ್ದರು. 2025ರಲ್ಲಿ ಬಿಳಿಯ ಬಣ್ಣದ ಮಧುಬನಿ ಸಿಲ್ಕ್ (ಬಿಹಾರದ ಕಲೆ) ಸೀರೆ ಧರಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















