ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅನುಷ್ಠಾನವನ್ನು ವಿರೋಧಿಸುವ ಹಕ್ಕು ಯಾವುದೇ ರಾಜ್ಯ ಸರ್ಕಾರಗಳಿಗಿಲ್ಲ ಎಂದು ವಿರೋಧಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ Amith Shah ಚಾಟಿ ಬೀಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸಿಎಎ ಅನುಷ್ಠಾನವನ್ನು CAA Implementation ವಿರೋಧಿಸುತ್ತಿರುವ ಬಿಜೆಪಿಯೇತರ ಆಡಳಿತದ ರಾಜ್ಯಗಳಿಗೆ ಟಕ್ಕರ್ ನೀಡಿದ್ದಾರೆ.

Also read: ಶೂಟಿಂಗ್ ವೇಳೆ ಅವಘಡ | ನಟಿ ರಾಗಿಣಿ ದ್ವಿವೇದಿ ಕಾಲಿಗೆ ಪೆಟ್ಟು | ಹೇಗಿದ್ದಾರೆ ಈಗ?
ಮದ್ಯ ಹಗರಣ ಬಹಿರಂಗಗೊಂಡ ನಂತರ ಅರವಿಂದ್ ಕೇಜ್ರಿವಾಲ್ ತಮ್ಮ ಶಾಂತತೆಯನ್ನು ಕಳೆದುಕೊಂಡಿದ್ದಾರೆ. ಸಿಎಎಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವ ಅನೇಕ ಜನರು ಈಗಾಗಲೇ ಭಾರತದಲ್ಲಿದ್ದಾರೆ ಎಂದು ಅವರಿಗೆ ತಿಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸಿಎಎ ಸಂವಿಧಾನದ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ಪೌರತ್ವಕ್ಕೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ ಎಂದು ಪ್ರತಿಪಾದಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post