ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಯುದ್ಧಭೂಮಿ ಇಸ್ರೇಲ್‌ನಿಂದ Israle ಆಪರೇಷನ್ ಅಜಯ್ ಕಾರ್ಯಾರಣೆ Operation Ajay Mission ಅಡಿಯಲ್ಲಿ ವಿಶೇಷ ವಿಮಾನದ ಮೂಲಕ 212 ಜನ ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.
#WATCH | First flight carrying 212 Indian nationals from Israel, lands at Delhi airport; received by Union Minister Rajeev Chandrasekhar pic.twitter.com/uB71qIBmJy
— ANI (@ANI) October 13, 2023
ಇಸ್ರೇಲ್‌ನಿಂದ ಹೊರಟ ಮೊದಲ ವಿಮಾನದಲ್ಲಿ ಇಂದು ಬೆಳಿಗ್ಗೆ ದೆಹಲಿ ಅಂತರರಾಷ್ಟ್ರೀ ವಿಮಾನ ನಿಲ್ದಾಣ ತಲುಪಿದ 212 ಮಂದಿ ಭಾರತೀಯರನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ Minister Rajeev Chandrashekar ಬರಮಾಡಿಕೊಂಡರು.
ಇಸ್ರೇಲ್‌ನಲ್ಲಿ ಸಿಲುಕಿರುವ 18 ಸಾವಿರ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಿದ್ದು, ವಿದೇಶಾಂಗ ಸಚಿವ ಎಸ್. ಜೈಶಂಕರ್ ಆಪರೇಷನ್ ಅಜಯ್ ಕಾರ್ಯಾಚರಣೆಗೆ ಚಾಲನೆ ನೀಡಿದ್ದರು. ಇದರಂತೆ ಇಂದು ಬೆಳಿಗ್ಗೆ ಭಾರತೀಯರ ಮೊದಲ ತಂಡವನ್ನು ಹೊತ್ತ ವಿಶೇಷ ವಿಮಾನ ದೆಹಲಿ ತಲುಪುವಲ್ಲಿ ಯಶಸ್ವಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post