ಕಲ್ಪ ಮೀಡಿಯಾ ಹೌಸ್ | ನವದೆಹಲಿ |
70 ವರ್ಷಗಳಲ್ಲಿ ದೇಶದಲ್ಲಿ ಆದಂತಹ ಲೋಪದೋಷಗಳನ್ನು ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಕೇವಲ 10 ವರ್ಷದಲ್ಲಿ ಪರಿಹಾರ ಮಾಡಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ Amith Shah ಅಭಿಪ್ರಾಯಪಟ್ಟರು.
ಒಆರ್’ಎಫ್ ವಿದೇಶಾಂಗ ನೀತಿ ಸಮೀಕ್ಷೆ’ಗೆ ಚಾಲನೆ ನೀಡಿ, ನಾಳೆಯಾಚೆಗಿನ ಭದ್ರತೆ: ಭಾರತದ ಭದ್ರ ಭವಿಷ್ಯವನ್ನು ರೂಪಿಸುವುದು ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸ್ವಾತಂತ್ರ ನಂತರ ದಶಕಗಳ ಕಾಲ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣಗಳು ದೇಶದ ಅಭಿವೃದ್ಧಿಗೆ ಅಡ್ಡಿಯಾಗಿದ್ದವು. ಪ್ರಸ್ತುತ ಕಾಲಘಟ್ಟದಲ್ಲಿ ಮೋದಿಯವರ ನಾಯಕತ್ವದಲ್ಲಿ ಮತ್ತು ಅಮಿತ್ ಶಾ ಅವರ ನುರಿತ ಮಾರ್ಗದರ್ಶನದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ತುಷ್ಟೀಕರಣದಂತಹ ಅನಿಷ್ಟಗಳನ್ನು ಬೇರು ಸಮೇತ ಕಿತ್ತು ಹಾಕಿರುವುದು ಮಾತ್ರವಲ್ಲದೆ ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವ ಪ್ರಯತ್ನ ನಡೆಯುತ್ತಿದೆ.

ಸ್ವಾತಂತ್ರದ ನಂತರ, ದೇಶವು ಆಂತರಿಕ ಭದ್ರತೆಯ ವಿಷಯಗಳಲ್ಲಿ ಭಯೋತ್ಪಾದನೆ ಮತ್ತು ಎಡಪಂಥೀಯ ಉಗ್ರವಾದದಿಂದ ವರ್ಷಗಟ್ಟಲೆ ಸಮಸ್ಯೆಗೆ ಒಳಗಾಗಿವೆ. ಸ್ಪಷ್ಟವಾಗಿ ಹೇಳಬೇಕೆಂದರೆ ಜಮ್ಮು ಮತ್ತು ಕಾಶ್ಮೀರ, ಎಡಪಂಥೀಯ ಉಗ್ರವಾದದಿಂದ ಪ್ರಭಾವಿತವಾಗಿರುವ ಪ್ರದೇಶಗಳು ಮತ್ತು ಈಶಾನ್ಯದ ರಾಜ್ಯಗಳು ಈ ಸಮಸ್ಯೆಯಿಂದ ಬಳಲಿದವು.

ಆಧುನಿಕ ರಾಜಕಾರಣದ ಚಾಣಕ್ಯ’ ಎಂದೇ ಖ್ಯಾತರಾಗಿರುವ ಶಾ, ಗಡಿ ಭದ್ರತೆಯೇ ದೇಶದ ಭದ್ರತೆಯಾಗಿರುವುದರಿಂದ, ದೇಶದ ಗಡಿಗಳು ಸುರಕ್ಷಿತವಾಗಿರದಿದ್ದರೆ ದೇಶ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ನಂಬುತ್ತಾರೆ. ಬಡತನ ನಿರ್ಮೂಲನೆಯಿಂದ ಹಿಡಿದು ಆರೋಗ್ಯ, ಬಾಹ್ಯಾಕಾಶ, ಹೂಡಿಕೆ ಮತ್ತು ಆಂತರಿಕ ಮತ್ತು ಬಾಹ್ಯ ಭದ್ರತೆಯವರೆಗಿನ ಮೋದಿಯವರ ದೂರದೃಷ್ಟಿ ಮತ್ತು ಶಾ ಅವರ ನೀತಿಗಳಿಂದಾಗಿ ಭಾರತವು ಮೊದಲಿಗಿಂತ ಈಗ ಪ್ರತಿ ಕ್ಷೇತ್ರದಲ್ಲೂ ಅತ್ಯಂತ ಬಲಿಷ್ಠವಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post