ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ತನ್ನ ಪ್ರೇಯಸಿಯನ್ನೇ ಕೊಂದು, 35 ತುಂಡು ಮಾಡಿ ಆಕೆಯ ದೇಹದ ಭಾಗಗಳು ಫ್ರಿಡ್ಜ್’ನಲ್ಲಿ ಇರುವಾಗಲೇ ಅದೇ ಮನೆಗೆ ಅಫ್ತಾಬ್ Aftab ಎಂಬ ಪಾಪಿ ಮತ್ತೊಬ್ಬಳನ್ನು ಕರೆತಂದು ಸಂಗ ಬೆಳೆಸುತ್ತಿದ್ದ ಎಂದು ವರದಿಯಾಗಿದೆ.
ಪ್ರಕರಣ ಕುರಿತಂತೆ ಪೊಲೀಸರ ವಶದಲ್ಲಿರುವ ಅಫ್ತಾಬ್ ಬಾಯಿ ಬಿಡುತ್ತಿರುವ ಒಂದೊಂದೇ ಸತ್ಯಗಳು ಬೆಚ್ಚಿ ಬೀಳುವಂತಿವೆ.
ಶ್ರದ್ಧಾ Shraddha ಜೀವಂತವಾಗಿರುವುದನ್ನು ಬಿಂಬಿಸಲು ಆಕೆಯ ಇನ್‌ಸ್ಟಾಗ್ರಾಂ ಖಾತೆಯನ್ನು ತಾನೇ ಬಳಸುತ್ತಿದ್ದ ಈತ, ಆಕೆಯನ್ನು ಕೊಲೆಗೈದ ಬಳಿಕ ಇನ್ನೊಬ್ಬ ಮಹಿಳೆಯನ್ನು ಅದೇ ಫ್ಲಾಟ್’ಗೆ ಕರೆ ತಂದಿದ್ದ ಎನ್ನಲಾಗಿದೆ.

Also read: 45 ಗಂಟೆ, 20 ಸಭೆ, 10 ವಿಶ್ವ ನಾಯಕರ ಭೇಟಿ: ಜಿ20 ಶೃಂಗದಲ್ಲಿ ಪ್ರಧಾನಿ ಮೋದಿ ಟೈಟ್ ಶೆಡ್ಯೂಲ್
ಇನ್ನು ಅಫ್ತಾಬ್ ಶ್ರದ್ಧಳನ್ನು ಕೊಲೆಗೈದು ಫ್ರಿಡ್ಜ್’ನಲ್ಲಿ ದೇಹದ ತುಂಡುಗಳನ್ನು ಇಟ್ಟುಕೊಂಡದ್ದಲ್ಲದೆ, ಇದೇ ವೇಳೆ ಇನ್ನೊಬ್ಬ ಮಹಿಳೆಯನ್ನು ಫ್ಲಾಟ್’ಗೆ ಕರೆ ತಂದು ಆಕೆಯೊಂದಿಗೆ ಸಂಬಂಧ ಹೊಂದಿದ್ದ ಎಂಬ ಸತ್ಯವೂ ಬಯಲಾಗಿದೆ.












Discussion about this post