ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದ್ದ ರಾಜಧಾನಿ ನವದೆಹಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣದ ರೀತಿಯಲ್ಲಿ ಇನ್ನೊಂದು ಕೊಲೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಜಾಫ್’ಗಡ ಮಿತ್ರಾನ್ ಗ್ರಾಮದ ಹೊರವಲಯದ ಡಾಬಾವೊಂದರಲ್ಲಿ ಘಟನೆ ನಡೆದಿದೆ. ಮೃತಳನ್ನು ನಿಕ್ಕಿ ಯಾದವ್ ಎಂದು ಗುರುತಿಸಲಾಗಿದೆ.
ನಿಕ್ಕಿಯ ಗೆಳೆಯ ಸಾಹಿಲ್ ಗೆಹ್ಲೋಟ್ (24) ಆಕೆಯನ್ನು ಕತ್ತು ಹಿಸುಕಿ ಕೊಂದು ಆಕೆಯ ಶವವನ್ನು ಫ್ರಿಡ್ಜ್’ನಲ್ಲಿ ಇರಿಸಿದ್ದ ಎಂದು ಆರೋಪಿಸಲಾಗಿದೆ.
Also read: ಬಾಲಿವುಡ್’ಗಾಗಿ ತೂಕ ಇಳಿಸಿಕೊಂಡ ಸಪ್ತಮಿ ಗೌಡ: ಹೊಸ ಫೋಟೋಗೆ ಫ್ಯಾನ್ಸ್ ಫಿದಾ
ಆರೋಪಿಯು ತನ್ನ ಮೊಬೈಲ್ನ ಡೇಟಾ ಕೇಬಲ್ ಅನ್ನು ಬಳಸಿ ಮಹಿಳೆಯ ಕತ್ತು ಹಿಸುಕಿ ಕೊಂದಿದ್ದಾನೆ. ಶವವನ್ನು ಫ್ರಿಡ್ಜ್’ನಲ್ಲಿ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದು, ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ.
ಸಾಹಿಲ್ ಹಾಗೂ ನಿಕ್ಕಿ ಜೊತೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದ್ದು, ಆರೋಪಿಯು ಬೇರೊಬ್ಬ ಮಹಿಳೆಯನ್ನು ಮದುವೆಯಾಗುವುದನ್ನು ವಿರೋಧಿಸಿದ ನಿಕ್ಕಿ ಯಾದವ್’ಳನ್ನು ಹತ್ಯೆ ಮಾಡಲಾಗಿತ್ತು. ಆಕೆಯನ್ನು ಕೊಲ್ಲಲು ಡೇಟಾ ಕೇಬಲ್ ಬಳಸಿದ್ದು, ನಂತರ ಆಕೆಯ ದೇಹವನ್ನು ಫ್ರೀಜರ್’ನಲ್ಲಿ ತುಂಬಿದ್ದಾನೆ. ಪ್ರಾಥಮಿಕ ತನಿಖೆಯಿಂದ 2 ರಿಂದ 3 ದಿನಗಳ ಹಿಂದೆ ಮಹಿಳೆಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post