ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಶಹೀದ್ ಇ ಆಜಂ ಭಗತ್ ಸಿಂಗ್ ಅವರ 115 ನೇ ಜನ್ಮದಿನವಾದ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ Minister Nirmala Seetharaman ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ Shahid Bhagath Singh International Airport ಎಂದು ನಾಮಕರಣ ಮಾಡಿದ್ದಾರೆ.
ಕಳೆದ ಭಾನುವಾರ ತಮ್ಮ ಮನ್ ಕಿ ಬಾತ್ Man ki baath ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಅವರ ಹೆಸರನ್ನು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದರು.

Also read: ದುರ್ಗಾ ಮಾತೆ, ವರ್ಜಿನ್ ಮೇರಿ ಮೂರ್ತಿ ಹಾನಿ ಹಿನ್ನೆಲೆ ಮುಸ್ಲಿಂ ಮಹಿಳೆಯರು ಪೊಲೀಸ್ ವಶಕ್ಕೆ
ಅತಿಥಿಗಳನ್ನು ಸ್ವಾಗತಿಸಿದ ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿಜಯ್ ಕುಮಾರ್ ಸಿಂಗ್ ಅವರು ಭಗತ್ ಸಿಂಗ್ ಅವರ ಸರ್ವೋಚ್ಚ ತ್ಯಾಗವನ್ನು ಸ್ಮರಿಸಿದರು. ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಶಹೀದ್ ಭಗತ್ ಸಿಂಗ್ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.



















Discussion about this post