ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರತದ ಐತಿಹಾಸಿಕ ಚಂದ್ರಯಾನ-3 Chandrayana-3 ಯಶಸ್ವಿಯಾದ ಬೆನ್ನಲ್ಲೇ ನಮ್ಮ ದೇಶದ ಮುಂದಿನ ಗುರಿ ಸೂರ್ಯ ಹಾಗೂ ಶುಕ್ರ ಗ್ರಹಗಳ Venus ಅಧ್ಯಯನ ಎಂಬ ವಿಚಾರ ಹೊರಬಿದ್ದಿದ್ದು, ಇಡಿಯ ವಿಶ್ವವೇ ನಮ್ಮತ್ತ ಹುಬ್ಬೇರಿಸಿ ನೋಡುತ್ತಿದೆ.
ಹೌದು… ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ VikramLander ಇಂದು ಸಂಜೆ 6.10ಕ್ಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡ್ ಆಗಿದ್ದು, ಈ ಮೂಲಕ ವಿಶ್ವದ ಭೂಪಟ ಹಾಗೂ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆಯಲಾಗಿದೆ.
ಚಂದ್ರಯಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಇಸ್ರೋ ISRO ವಿಜ್ಞಾನಿಗಳನ್ನು ಮನದುಂಬಿ ಅಭಿನಂದಿಸಿದ್ದು, ಇಡಿಯ ದೇಶವೇ ನಿಮ್ಮ ಸಾಧನೆಗೆ ಹೆಮ್ಮೆ ಪಡುತ್ತದೆ. ಇಸ್ರೋ ಅಧ್ಯಕ್ಷ ಸೋಮನಾಥ್ ISRO President Somanath ಅವರ ಹೆಸರು ಚಂದ್ರ ಇರುವವರೆಗೂ ಇರುತ್ತದೆ ಎಂದು ಪ್ರಶಂಸಿಸಿದ್ದಾರೆ.
ಇನ್ನು, ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆ ಸೂರ್ಯಯಾನ Suryayana ಆದಿತ್ಯ ಎಲ್ 1 Adithya L-1 ಯೋಜನೆಗೆ ಸಿದ್ದತೆ ನಡೆಸಿದ್ದು, ಶೀಘ್ರದಲ್ಲೇ ಉಡಾವಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಏನಿದು ಆದಿತ್ಯ ಎಲ್ 1:
ಆದಿತ್ಯ ಎಲ್ 1 ಭಾರತದ ಮೊದಲಸೌರ ಮಿಷನ್ ಆಗಿದ್ದು ಸುಮಾರು 5 ವರ್ಷಗಳ ಕಾಲ ಸೂರ್ಯನ ಅಧ್ಯಯನ ಮಾಡಲಿದೆ. ಪಿಎಸ್’ಎಲ್’ವಿ ರಾಕೆಟ್ ಮೂಲಕ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ.
Also read: ಸಿಲಿಂಡರ್ ಸ್ಪೋಟಗೊಂಡು ವ್ಯಕ್ತಿ ದುರ್ಮರಣ: ಇಬ್ಬರಿಗೆ ತೀವ್ರ ಗಾಯ
ವರದಿಯೊಂದರ ಪ್ರಕಾರ, ಬಾಹ್ಯಾಕಾಶ ನೌಕೆಯು ವಿಭಿನ್ನ ಕೋನಗಳಿಂದ ಸೂರ್ಯನನ್ನು ಅಧ್ಯಯನ ಮಾಡಲು ಏಳು ವೈಜ್ಞಾನಿಕ ಪೇಲೋಡ್’ಗಳನ್ನು ಹೊಂದಿರಲಿದೆ. ಮೊದಲ ಹಂತದಲ್ಲಿ ಭೂಮಿಯ ಕೆಳಕಕ್ಷೆಯಲ್ಲಿ ಇದನ್ನು ಇರಿಸಲಾಗುತ್ತದೆ. ಪರಿಣಾಮವಾಗಿ ಸುಲಭವಾಗಿ ಸೂರ್ಯನ ಅಧ್ಯಯನ ನಡೆಸುವುದು ವಿಜ್ಞಾನಿಗಳಿಗೆ ಸಾಧ್ಯವಾಗಲಿದೆ.
ಖಗೋಳ ಎಕ್ಸ್-ರೇ ಮೂಲಗಳ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡಲು ದೇಶದ ಮೊದಲ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಇದು ನಕ್ಷತ್ರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸೌರವ್ಯೂಹದ ಹೊರಗಿನ ಗ್ರಹಗಳನ್ನು ಅಧ್ಯಯನ ಮಾಡಲು ಉಪಗ್ರಹವನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ.
ಬಾಹ್ಯಾಕಾಶ ಸಂಸ್ಥೆಯು ಹವಾಮಾನ ವೀಕ್ಷಣಾ ಉಪಗ್ರಹ LWÉRCS-3FR ಅನ್ನು ಉಡಾವಣೆ ಮಾಡಲು ಯೋಜಿಸಿದೆ. ದೇಶದ ಮೊದಲ ಮಾನವ ಬಾಹ್ಯಾಕಾಶ ಯಾನ ಗಗನ್ ಯಾನ್’ಗೆ ಸಿದ್ಧತೆಗಳು ನಡೆಯುತ್ತಿವೆ.
ಸೂರ್ಯಯಾನ ಆದಿತ್ಯ ಎಲ್1 ನಂತರ ಭಾರತ ಶುಕ್ರ ಗ್ರಹದ ಅಧ್ಯಯನದ ಯೋಜನೆಗೆ ಸಿದ್ದವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post