ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಹಲವು ಬಾರಿ ಇಳಿಕೆಯಾಗಿದ್ದ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ವರ್ಷಾಂತ್ಯಕ್ಕೆ ಏರಿಕೆ ಮಾಡಲಾಗಿದ್ದು, ಈ ಮೂಲಕ ವಾಣಿಜ್ಯ ಉದ್ಯಮಿಗಳಿಗೆ ಶಾಕ್ ನೀಡಿದೆ.
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್ Commercial gas ಬೆಲೆಯನ್ನು ರೂ.21 ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಹೊಸ ದರ ಅನ್ವಯವಾಗಲಿದೆ.
ದರ ಹೆಚ್ಚಳದ ಬಳಿಕ 19 ಕೆಜಿ ತೂಕದ ವಾಣಿಜ್ಯ ಎಲ್’ಪಿಜಿ ಸಿಲಿಂಡರ್ ಚಿಲ್ಲರೆ ಮಾರಾಟದ ಬೆಲೆ 1796.50 ರೂಪಾಯಿಗೆ ಏರಿಕೆಯಾಗಿದೆ. ಇದು ರಾಷ್ಟç ರಾಜಧಾನಿ ದೆಹಲಿಯ ಬೆಲೆಯಾಗಿದ್ದು, ಇದೇ ಬೆಲೆ ವಾಣಿಜ್ಯ ನಗರಿ ಮುಂಬೈನಲ್ಲಿ 1,749 ರೂಪಾಯಿಗೆ ಜಿಗಿತವಾಗಿದೆ.
Also read: ರಾಜ್ಯದ ಹಲವೆಡೆ 4 ದಿನ ಮಳೆ ಮುನ್ಸೂಚನೆ | ಶಿವಮೊಗ್ಗದ ಪರಿಸ್ಥಿತಿಯೇನು?
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,904 ರೂಪಾಯಿಗೆ ಏರಿಕೆಯಾಗಿದೆ. ಹೊಸದಾಗಿ ಬೆಲೆ ಪರಿಷ್ಕರಣೆ ಬಳಿಕ ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,968.5 ರೂಪಾಯಿ ಹಾಗೂ ಕೋಲ್ಕತ್ತದಲ್ಲಿ 1,908 ರೂಪಾಯಿ ಇದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post