ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ದೇಶದಲ್ಲಿ ಕೊರೋನಾ ಅಬ್ಬರ ಹೆಚ್ಚುತ್ತಲೇ ಇದ್ದು, ಇಂದು ಬೆಳಿಗ್ಗೆ ೮ರವರೆಗಿನ ೨೪ ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 39,726ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು, ಒಂದೇ ದಿನ ಇಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು 103 ದಿನಗಳ ಬಳಿಕ ಇದೇ ಮೊದಲು ಎನ್ನಲಾಗಿದೆ.
ದೇಶದಲ್ಲಿಂದು 39,726 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ, ಒಟ್ಟು ಸೋಂಕಿತರ ಸಂಖ್ಯೆ 1,15,14,331ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇದೇ ವೇಳೆ ಕೋವಿಡ್-19ಗೆ 24 ಗಂಟೆಗಳ ಅವಧಿಯಲ್ಲಿ 154 ಮಂದಿ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 1,59,370ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಕೊರೋನಾ ಸೋಂಕಿನ ಹೆಚ್ಚಳ ೯ನೇ ದಿನವೂ ಮುಂದುವರೆದಿದೆ ಎನ್ನಲಾಗಿದೆ.
ಡಿ.6ರಂದು 36,011 ಮಂದಿಯಲ್ಲಿ ಸೋಂಕು ಕಂಡು ಬಂದಿತ್ತು. ಅದಾದ ಬಳಿಕ ಮತ್ತೊಮ್ಮೆ ಸೋಂಕಿತರ ಸಂಖ್ಯೆ 35 ಸಾವಿರದ ಗಡಿಯನ್ನು ದಾಟಿದೆ. ಬುಧವಾರ 28,903 ಸೋಂಕಿತರು ಕಂಡು ಬಂದಿದ್ದರು, ಗುರುವಾರ 35,871 ಮಂದಿ ಸೋಂಕಿತು ಕಂಡು ಬಂದಿದ್ದರು. ಶುಕ್ರವಾರ ಅದಕ್ಕಿಂದ ಹೆಚ್ಚಿನ ಮಂದಿಯಲ್ಲಿ ಸೋಂಕು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ದೇಶದಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ ಇದೀಗ 2,71,282ಕ್ಕೆ ಏರಿಕೆಯಾಗಿದೆ. ಹಿಂದೆಲ್ಲಾ ಶೇ.97, ಶೇ.98ರವರೆಗೆ ಚೇತರಿಕೆ ಪ್ರಮಾಣ ಇದೀಗ ಶೇ.96.41ಕ್ಕೆ ಕುಸಿದಿದ್ದು, ಭಾರತದಲ್ಲಿ ಒಂದೇ ದಿನ 10,57,383 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದೆ. ಈವರೆಗೂ ದೇಶದಲ್ಲಿ 23,13,70,546 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post