ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಮೋದಿ Modi ಉಪನಾಮೆ ಟೀಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಸದ ರಾಹುಲ್ ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯೊಡ್ಡಿದ ಹಿನ್ನೆಲೆ ಅವರ ಲೋಕಸಭಾ ಸದಸ್ಯತ್ವ ಸ್ಥಾನವನ್ನು ಮರುಸ್ಥಾಪನೆಗೊಳಿಸಿ ಸಭಾ ಸಚಿವಾಲಯವು ಇಂದು ಆದೇಶ ಹೊರಡಿಸಿದೆ.
ವಯನಾಡ್ ಸಂಸದ ರಾಹುಲ್ ಗಾಂಧಿ Rahul Gandhi ಅವರನ್ನು ಮಾರ್ಚ್ 2023 ರಲ್ಲಿ ಕೆಳಮನೆಯಿಂದ ಅನರ್ಹಗೊಳಿಸಲಾಗಿತ್ತು. ಈ ಮೂಲಕ ರಾಹುಲ್ ಗಾಂಧಿಯವರ ಅರ್ಹತೆ ವಾಪಾಸ್ಸಾಗಿದ್ದು, ಮತ್ತೆ ಸಂಸದರಾಗಿ ಲೋಕಸಭೆ ಪ್ರವೇಶಿಸಲಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















