ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಒಳನುಸುಳುವಿಕೆಯ ಪ್ರಯತ್ನಗಳು 2022ರಲ್ಲಿ ದ್ವಿಗುಣಗೊಂಡಿದ್ದು, ಬಿಎಸ್ಎಫ್ ಜಾಗರೂಕವಾಗಿ ಅಂತಹ ಅನೇಕ ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಹಾನಿರ್ದೇಶಕ ಪಂಕಜ್ ಸಿಂಗ್ BSF DG Pankaj Singh ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ವೈಮಾನಿಕ ವಾಹನಗಳ ಮೂಲಕ ಇದುವರೆಗೆ 266 ಒಳನುಸುಳುವಿಕೆ ಪ್ರಯತ್ನಗಳನ್ನು ಮಾಡಲಾಗಿದ್ದು, ಬಿಎಸ್‌ಎಫ್ 2020 ರಲ್ಲಿ ಡ್ರೋನ್ ಹಾರಾಟದ 79 ಘಟನೆಗಳನ್ನು ಗುರುತಿಸಿದೆ. ಈ ಘಟನೆಗಳ ಸಂಖ್ಯೆ 2021 ರಲ್ಲಿ 109 ಕ್ಕೆ ಏರಿತು ಮತ್ತು ಈ ವರ್ಷ 266 ಕ್ಕೆ ದ್ವಿಗುಣಗೊಂಡಿದೆ ಎಂದಿದ್ದಾರೆ.
ಗಡಿಯಲ್ಲಿ ವಿಶೇಷವಾಗಿ ಪಂಜಾಬ್ ಮತ್ತು ಜಮ್ಮು – ಕಾಶ್ಮೀರದಲ್ಲಿ ಡ್ರೋನ್ ಒಳನುಗ್ಗುವಿಕೆಯ ಘಟನೆಗಳಲ್ಲಿ ಹೆಚ್ಚಳ ದಾಖಲಾಗಿದ್ದು,
ಪಂಜಾಬ್ ಗಡಿ ಮತ್ತು ಜಮ್ಮುವಿನಲ್ಲಿ ಕ್ರಮವಾಗಿ 215 ಮತ್ತು 22 ಡ್ರೋನ್ ಒಳನುಸುಳುವಿಕೆ ಪ್ರಕರಣಗಳು ವರದಿಯಾಗಿವೆ ಎಂದು ಸಿಂಗ್ ಹೇಳಿದರು. ಡ್ರೋಣ್ ಮೂಲಕ ಗಡಿಯಲ್ಲಿ ಮಾದಕ ದ್ರವ್ಯ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು, ನಕಲಿ ನೋಟುಗಳ ಕಳ್ಳಸಾಗಣೆಯಲ್ಲಿ ಹೆಚ್ಚಳ ದಾಖಲಾಗಿದೆ ಎಂದು ಹೇಳಿದರು.
ಭಾರತದೊಳಗೆ ಡ್ರೋನ್ ನುಸುಳಿಸಲು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಏಜೆನ್ಸಿಯಿಂದ ಕಳ್ಳಸಾಗಣೆದಾರರಿಗೆ ತರಬೇತಿ ಮತ್ತು ಸಹಾಯವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post