ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರೀ ಕುತೂಹಲ ಕೆರಳಿಸಿದ ರಾಷ್ಟ್ರಪತಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ದೇಶದ 15ನೇ ಪ್ರಥಮ ಪ್ರಜೆಯಾಗಿ ದ್ರೌಪದಿ ಮುರ್ಮು Droupadi Murmu ಆಯ್ಕೆಯಾಗಿದ್ದಾರೆ.
ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಪ್ರತಿಪಕ್ಷಗಳ ಅಭ್ಯರ್ಥಿ ಈ ಯಶವಂತ ಸಿನ್ಹಾ ಅವರ ವಿರುದ್ಧ ಭಾರೀ ಅಂತರದಿಂದ ಮುರ್ಮು ಆಯ್ಕೆಯಾಗಿದ್ದಾರೆ.

ದೇಶದ ಪ್ರಥಮ ಪ್ರಜೆಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿದ್ದು, ಬುಡಕಟ್ಟು ಜನಾಂಗದಿಂದ ಆಯ್ಕೆಯಾದ ಮೊಟ್ಟಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Also read: ಪ್ರಸಕ್ತ ವರ್ಷವೇ ಕಬಿನಿ ಜಲಾಶಯ ಉದ್ಯಾನವನ ಕಾಮಗಾರಿ ಪ್ರಾರಂಭ: ಸಿಎಂ ಬೊಮ್ಮಾಯಿ
ಬುಡಕಟ್ಟು ಜನಾಂಗಕ್ಕೆ ಸೇರಿದ ಮುರ್ಮು ಒಡಿಶಾದಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ 1997ರಲ್ಲಿ ರಾಯ್‌ರಂಗಪುರ್ ಕೌನ್ಸಿಲರ್ ಆಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರಯಾಣ ಆರಂಭಿಸಿದರು.

2015ರಲ್ಲಿ ಜಾರ್ಖಂಡ್ ರಾಜ್ಯದ ಮೊಟ್ಟಮೊದಲ ಮಹಿಳಾ ರಾಜ್ಯಪಾಲೆಯಾಗಿ ನೇಮಕಗೊಂಡಿದ್ದ ಮುರ್ಮು ಇದೀಗ ರಾಷ್ಟ್ರಪತಿ ಭವನದತ್ತ ತಮ್ಮ ಹೆಜ್ಜೆಯನ್ನು ಹಾಕಿದ್ದಾರೆ.










Discussion about this post