ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನವದೆಹಲಿಯಲ್ಲಿ ಜನತಾದಳ (ಯುನೈಟೆಡ್) JanathaDal (U) ಮಾಜಿ ಅಧ್ಯಕ್ಷ ಶರದ್ ಯಾದವ್ Sharad Yadav ವಾಸವಿರುವ ಸರ್ಕಾರಿ ಬಂಗಲೆಯನ್ನು 15 ದಿನಗಳೊಳಗೆ ತೆರವು ಮಾಡುವಂತೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
2017ರಲ್ಲಿ ರಾಜ್ಯಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡ ಕಾರಣ, ತುಖ್ಲಕ್ ರಸ್ತೆಯಲ್ಲಿರುವ ಬಂಗಲೆಯನ್ನು 15 ದಿನಗಳಲ್ಲಿ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಶರದ್ ಯಾದವ್ ಅವರಿಗೆ ಸೂಚಿಸಿದೆ.
Also read: ನಿಮ್ಮ ಮಕ್ಕಳಿಗೆ ಈ ಲಸಿಕೆಗಳನ್ನು ಹಾಕಿಸಿದ್ದೀರಾ? ಇಲ್ಲವಾದರೆ ತಪ್ಪದೇ ಹಾಕಿಸಿ!
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರ ಪೀಠ, ಯಾದವ್ ಅವರನ್ನು ರಾಜ್ಯಸಭಾ ಸಂಸದರಾಗಿ ಅನರ್ಹಗೊಳಿಸಿ ನಾಲ್ಕು ವರ್ಷಗಳು ಕಳೆದಿದೆ. ಡಿಸೆಂಬರ್ 15, 2017ರಂದು ಶರದ್ ಯಾದವ್ ಅವರಿಗೆ ತುಖ್ಲಕ್ ರಸ್ತೆಯಲ್ಲಿರುವ ಅವರ ಅಧಿಕೃತ ನಿವಾಸದ ಬಳಕೆ ಸೇರಿದಂತೆ ಸಂಸದರ ಅಧಿಕೃತ ಸವಲತ್ತುಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಅವಕಾಶ ನೀಡಿದ್ದ ಏಕ ಸದಸ್ಯ ಪೀಠದ ಮಧ್ಯಂತರ ಆದೇಶ ಮುಂದುವರಿಸುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post