ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ವಿಶ್ವದಲ್ಲಿ ಇಂದು ಭಾರತ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದ್ದು, ಭಾರತದಲ್ಲಿನ ವೇಗದ ಅಭಿವೃದ್ಧಿ ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ. ಅರ್ಥವ್ಯವಸ್ಥೆಯಲ್ಲಿ ಭಾರತ ಶೀಘ್ರದಲ್ಲೇ 3ನೇ ಸ್ಥಾನಕ್ಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ PM Narendra Modi ಹೇಳಿದರು.
ಇಂದಿನಿಂದ ಸಂಸತ್ ವಿಶೇಷ ಅಧಿವೇಶನ ಆರಂಭಗೊಂಡಿದ್ದು, ಹಳೇ ಸಂಸತ್ ಭವನದಲ್ಲಿ Old Parlimentary House ಕಲಾಪಕ್ಕೆ ವಿದಾಯ ಹಿನ್ನೆಲೆ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಭಾಷಣ ಮಾಡಿದರು.

Also read: ಟಿಕೆಟ್ ಹಂಚಿಕೆ ತೀರ್ಮಾನ ವರಿಷ್ಠರ ನಿರ್ಧಾರವೇ ಅಂತಿಮ: ನಿಖಿಲ್ ಕುಮಾರಸ್ವಾಮಿ
ಸ್ವತಂತ್ರ ಭಾರತದಲ್ಲಿ ಸಂಸತ್, ಸಂವಿಧಾನ, ಪ್ರಜಾಪ್ರಭುತ್ವ, ಸಂಸದರ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ ಮೋದಿ, ಭಾರತ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿದರು. ತಮ್ಮ ಭಾಷಣದ ಅಂತ್ಯದಲ್ಲಿ ಹಳೇ ಸಂಸತ್ ಭವನಕ್ಕೆ ಸಂವಿಧಾನ ಸದನ ಎಂದು ಹೆಸರು ಸೂಚಿಸಿದ್ದು, ಈ ಹೆಸರಿಗೆ ವಿಪಕ್ಷಗಳು ಚರ್ಚಿಸಿ ನಿರ್ಧಾರ ತಿಳಿಸಲು ಕೋರಿದರು.

ಹೊಸ ಸದನಕ್ಕೆ ನಾವು ಇಂದು ಪಾದಾರ್ಪಣೆ ಮಾಡುತ್ತಿದ್ದು, ಈ ಹಳೇ ಸಂಸತ್ ಭವನನ್ನು ಸಂವಿಧಾನ ಸದನ ಎಂಬ ಹೆಸರಿನೊಂದಿಗೆ ಕರೆಯಲು ಇಚ್ಚಿಸುತ್ತೇನೆ. ಇದಕ್ಕೆ ನಿಮ್ಮ ಒಪ್ಪಿಗೆ ಇದ್ದರೆ ಸಹಮತಿ ಸೂಚಿಸಬೇಕು. ಹಾಗೂ ಈ ಮೂಲಕ ಹೊಸ ಪೀಳಿಗೆಗೆ ಈ ಸಂಸತ್ ಭವನ ಕಟ್ಟದ ಇತಿಹಾಸ ತಿಳಿಯಲು ನೆರವಾಗಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post