ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ವಿಶ್ವದ ಮುಂದೆ ಭಾರತದ ಈ ಐತಿಹಾಸಿಕ ಕ್ಷಣ ಚಿರಂಜೀವಿ ಚೇತನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ PM Narendra Modi ಸಂತಸ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ-3ರ Chandrayaana-3 ವಿಕ್ರಂ ಲ್ಯಾಂಡರ್ Vikram Lander ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಗುವ ಮೂಲಕ ವಿಶ್ವದ ಭೂಪಟದಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ದೇಶವನ್ನು ಉದ್ದೇಶಿಸಿ ಅವರು ದಕ್ಷಿಣ ಆಫ್ರಿಕಾದಿಂದ ನೇರ ಪ್ರಸಾರದಲ್ಲಿ ಮಾತನಾಡಿದರು.

ಇಸ್ರೋ ISRO ವಿಜ್ಞಾನಿಗಳು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಚಂದ್ರನ ದಕ್ಷಿಣ ದೃವದಲ್ಲಿ ಲ್ಯಾಂಡರ್ ಇಳಿಸುವ ಮೂಲಕ ನಮ್ಮ ದೇಶದ ಅಂತಃಸತ್ವವನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ದೇಶದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಿಕ್ಕಿರುವ ಈ ಯಶಸ್ಸು ಪ್ರಪಂಚದ ಭೂಪಟದಲ್ಲಿ ಭಾರತವನ್ನು ಎತ್ತರದಲ್ಲಿ ನಿಲ್ಲಿಸಿದೆ ಎಂದರು.

Also read: ಫಲಿಸಿದ ತಿರುಪತಿ ತಿಮ್ಮಪ್ಪನ ಅನುಗ್ರಹ: ಚಂದ್ರಯಾನ-3 ವಿಕ್ರಂ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿ











Discussion about this post