ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನಿರೀಕ್ಷೆಯಂತೆ ಎಐಸಿಸಿ ನೂತನ ಅಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ ಹಿರಿಯ ಕಾಂಗ್ರೆಸ್ ನಾಯಕ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ Mallikarjuna Kharge ಆಯ್ಕೆಯಾಗಿದ್ದಾರೆ.
ಎಐಸಿಸಿ ಅಧ್ಯಕ್ಷರ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು, ೨೮೯೭ ಮತಗಳನ್ನು ಗಳಿಸಿ ಖರ್ಗೆ ಕಾಂಗ್ರೆಸ್ನ ಅತ್ಯುನ್ನತ ಪದವಿಗೇರಿದ್ದಾರೆ.
ಈ ಮೂಲಕ 24 ವರ್ಷಗಳ ನಂತರ ಗಾಂಧಿ ಕುಟುಂಬೇತರರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಖರ್ಗೆ ಪ್ರತಿಸ್ಪರ್ಧಿಯಾಗಿದ್ದ ಶಶಿತರೂರ್ ಅವರು, ಒಂದು ಸಾವಿರ ಮತಗಳನ್ನು ಗಳಿಸಿದ್ದರೆ, 416 ಮತಗಳು ತಿರಸ್ಕೃತಗೊಂಡಿವೆ. ಖರ್ಗೆ ಗೆಲುವಿನ ಹಿನ್ನೆಲೆಯಲ್ಲಿ ಅವರ ಊರು, ಕೆಪಿಸಿಸಿ ಕಚೇರಿ ಹಾಗೂ ನವದೆಹಲಿಯ ಎಐಸಿಸಿ ಕಚೇರಿ ಮುಂದೆ ಬೆಂಬಗಲಿಗರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
Also read: ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಬಾಧೆ ಹಿನ್ನೆಲೆ ದೆಹಲಿಗೆ ನಿಯೋಗ: ಗೃಹ ಸಚಿವ ಆರಗ ಜ್ಞಾನೇಂದ್ರ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















