ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನರೇಂದ್ರ ಮೋದಿ ಜೀ ದಯವಿಟ್ಟು ಬಂದು ನಮ್ಮನ್ನು ರಕ್ಷಿಸಿ ಎಂದು ಪಾಕಿಸ್ತಾನಿ ಆಕ್ರಮಿತ ಕಾಶ್ಮೀರದ ನಿವಾಸಿ ಮಲ್ಲಿಕ್ ವಾಸಿಂ ಎಂಬಾತ ಬೇಡಿಕೊಂಡಿರುವ ವೀಡಿಯೋವೊಂದು ಇದೀಗ ಭಾರೀ ವೈರಲ್ ಆಗಿದೆ.
#Breaking #Muzaffarabad #AzadKashmir ppl invite @PMOIndia to rescue them, pleading @narendramodi for help saying that their properties belong to India & Hindus & Sikhs. Police has sealed house of a citizen & forced his family & children to live on the street in this January cold. pic.twitter.com/IJLEeOjtbl
— Prof. Sajjad Raja (@NEP_JKGBL) January 18, 2022

ಮಲ್ಲಿಕ್ ವಾಸಿಂ ಎಂದು ತನ್ನನ್ನು ಪರಿಚಯಿಸಿಕೊಂಡಿರುವ ವ್ಯಕ್ತಿ. ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು. ನಮ್ಮೊಂದಿಗೆ ಸಿಖ್ ಸಮುದಾಯದವರು ಇದ್ದಾರೆ. ಪೊಲೀಸ್‌ನವರು ನಮ್ಮ ನಿವಾಸಗಳನ್ನು ಸೀಲ್ ಮಾಡಿದ್ದಾರೆ. ಅಲ್ಲದೆ, ಊರು ತೊರೆಯುವಂತೆ ಬೆದರಿಸುತ್ತಿದ್ದಾರೆ. ನಮಗೆ ಏನಾದರೂ ತೊಂದರೆಯಾದರೆ ಅದಕ್ಕೆ ಮುಜಾಫರಾಬಾದ್ ಕಮಿಸನರ್ ಹಾಗೂ ತಹಶೀಲ್ದಾರ್‌ಗಳೇ ಕಾರಣ. ನಾವು ಸಂಕಷ್ಟದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ನೆರವಿಗೆ ಧಾವಿಸಿ ನಮ್ಮನ್ನು ರಕ್ಷಿಸುವಂತೆ ಭಾರತ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೇಡಿಕೊಳ್ಳುತ್ತೇವೆ ಎಂದಿದ್ದಾನೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















