ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಜ್ಯದಿಂದ ರಾಷ್ಟ್ರ ರಾಜಕೀಯಕ್ಕೆ ತಮ್ಮ ಛಾಪು ಮೂಡಿಸಿರುವ ನವರಸ ನಾಯಕ ಜಗ್ಗೇಶ್ Actor Jaggesh ಅವರು ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜ್ಯಸಭೆಯಲ್ಲಿ ಶ್ರದ್ಧೆಯಿಂದ
ಪ್ರಮಾಣವಚನ ಸಿರಿಗನ್ನಡದಲ್ಲಿ
ರಾಯರ ಹೆಸರಲ್ಲಿ ಸ್ವೀಕರಿಸಿದ ನನ್ನ ಬದುಕಿನ ಶ್ರೇಷ್ಠಕ್ಷಣ…
ಹೃದಯಪೂರ್ವಕ ಧನ್ಯವಾದ @narendramodi@BJP4Karnataka @BSBommai @blsanthosh @nalinkateel @arunbpbjp ರವರಿಗೆ🙏 pic.twitter.com/CCppTvZrmD— ನವರಸನಾಯಕ ಜಗ್ಗೇಶ್ (@Jaggesh2) July 8, 2022
ಇತ್ತೀಚೆಗಷ್ಟೇ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಜಗ್ಗೇಶ್ ಅವರು, ಇಂದು ಮೇಲ್ಮನೆಯಲ್ಲಿ ನೂತನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತಮ್ಮ ಬದುಕಿನುದ್ದಕ್ಕೂ ನಂಬಿಕೊಂಡು ಬಂದಿರುವ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ, ಕನ್ನಡದಲ್ಲೇ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷ.
ಈ ಕುರಿತಂತೆ ಸ್ವತಃ ಟ್ವೀಟ್ ಮಾಡಿರುವ ಅವರು, ರಾಜ್ಯಸಭೆಯಲ್ಲಿ ಶ್ರದ್ಧೆಯಿಂದ ಪ್ರಮಾಣವಚನ ಸಿರಿಗನ್ನಡದಲ್ಲಿ, ರಾಯರ ಹೆಸರಲ್ಲಿ ಸ್ವೀಕರಿಸಿದ ನನ್ನ ಬದುಕಿನ ಶ್ರೇಷ್ಠ ಕ್ಷಣ… ಹೃದಯಪೂರ್ವಕ ಧನ್ಯವಾದ ಎಂದು ಹಂಚಿಕೊಂಡಿದ್ದಾರೆ.
delhi #raghavendra #swamy #brindavan #darshan before my #oath as #mp #rajyasabha
ದೆಹಲಿಯ ರಾಯರಮಠದಲ್ಲಿ ಬೃಂದಾವನ ದರ್ಶನ ರಾಜ್ಯಸಭೆ
ಪ್ರಮಾಣ ಸ್ವೀಕರಿಸುವ ಮುನ್ನ🙏
ಹರಿ ಸರ್ವೋತ್ತಮ ವಾಯು ಜೀವೋತ್ತಮ🙏
ಶುಭ ಶುಕ್ರವಾರ 🙏
@parimala_jaggesh pic.twitter.com/3dVOZEftbc— ನವರಸನಾಯಕ ಜಗ್ಗೇಶ್ (@Jaggesh2) July 8, 2022
ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ನವದೆಹಲಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ ಜಗ್ಗೇಶ್ ದಂಪತಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post