ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರತ್ ಜೋಡೋ Bharath Jodo ಯಾತ್ರೆಯಲ್ಲಿ ರಾಹುಲ್ ಗಾಂಧಿ Rahul Gandhi 113 ಬಾರಿ ಭದ್ರತಾ ನಿಯಮ ಉಲ್ಲಂಘನೆ ಮಾಡಿರುವುದಾಗಿ ಕೇಂದ್ರದ ಅರೆಸೇನಾ ಪಡೆ ಸಿಆರ್‌ಪಿಎಫ್ CRPF ಹೇಳಿದೆ.
ಡಿಸೆಂಬರ್ 24ರ ಯಾತ್ರೆಯಲ್ಲಿ ಭದ್ರತಾ ವೈಫಲ್ಯ ಉಂಟಾಗಿರುವುದಾಗಿ ಕಾಂಗ್ರೆಸ್ ಮಾಡಿರುವ ಆರೋಪಗಳಿಗೆ ಸಿಆರ್‌ಪಿಎಫ್ ಪ್ರತಿಕ್ರಿಯಿಸಿದೆ.
ಪೊಲೀಸರು ರಾಹುಲ್ ಗಾಂಧಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ರಾಷ್ಟ್ರರಾಜಧಾನಿಯಲ್ಲಿ ಭದ್ರತಾ ವೈಫಲ್ಯವಾಗಿರುವ ಆರೋಪವನ್ನು ಭದ್ರತಾ ಪಡೆಯು ನಿರಾಕರಿಸಿದೆ.
ರಾಹುಲ್ ಗಾಂಧಿಗೆ ಅವರಿಗೆ `ಝಡ್ ಪ್ಲಸ್’ ಭದ್ರತೆ ನೀಡಲಾಗಿದ್ದು, ಭಾರತ್ ಜೋಡೋ ಯಾತ್ರೆಯು ಪಂಜಾಬ್, ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶಿಸಿದಾಗ ಅಗತ್ಯ ಭದ್ರತೆ ಖಚಿತಪಡಿಸುವಂತೆ ಕಾಂಗ್ರೆಸ್ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















