ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಎಂಸಿಎ ಉತ್ತಮವಾದ ಕಾರ್ಯನಿರ್ವಹಿಸುತ್ತಿದೆ, ಕರ್ನಾಟಕದಲ್ಲಿ ಉತ್ತಮವಾದ ಸೇವೆಯನ್ನು ನೀಡುತ್ತಿರುವ ಈ ಸಂಸ್ಥೆ ನವದೆಹಲಿಯಲ್ಲಿ ಶಾಖಾ ಕಚೇರಿ ಆರಂಭಿಸುವುದರ ಮೂಲಕ ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ Minister Murugesh Nirani ಹೇಳಿದರು.
ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವಟೈಸಿಂಗ್ ನ ನವದೆಹಲಿ ನೊಯಿಡಾದ ವರ್ಲ್ಡ್ ಅಸೋಸಿ ಯೇಷನ್ ಸ್ಮಾಲ್ &ಮೀಡಿಯಂ ಎಂಟರ್ ಪ್ರೈಸಸ್ (ಡಬ್ಲುಾ ಎ ಎಸ್ ಎಂ ಇ) ಆವರಣದ ಫ್ಲ್ಯಾಟ್ ನಂಬರ್ 4 ರಲ್ಲಿ ಶಾಖಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಕೆಲಸಗಳು ಮಾಡಿದಲ್ಲಿ ಸಂಸ್ಥೆ ಅಭಿವದ್ಧಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಂಸಿಎ ಸಂಸ್ಥೆ ಸಾಬೀತುಪಡಿಸಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಸ್ಥೆ ಸಮಾಜದಲ್ಲಿ ಉತ್ತಮ ಸೇವೆಯನ್ನು ನೀಡುವುದರ ಮೂಲಕ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ ಎಂದರು.
Also read: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಏ.9ರಂದು ಬೃಹತ್ ಪ್ರತಿಭಟನೆ: ಹೆಚ್.ಪಿ. ಗಿರೀಶ್
ಕರ್ನಾಟಕ ಸರ್ಕಾರದ ವತಿಯಿಂದ ನವೆಂಬರ್ ತಿಂಗಳಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ-2022ನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸುವರು. ಪ್ರಧಾನಿ ಮೋದಿಯವರ ಕನಸಿನಂತೆ ಉತ್ತಮ ಸೇವೆಯ ಮೂಲಕ ಸಮಾವೇಶ ಯಶಸ್ಸಿಗೆ ಎಲ್ಲರೂ ಶ್ರಮ ವಹಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಅಣ್ಣಾ ಸಾಹೇಬ್ ಜೊಲ್ಲೆ, ಶ್ರೀ ಸಿದ್ಧೇಶ್ವರ ಸ್ವಾಮೀಜಿ, ರಾಜ್ಯಸಭೆ ಸದಸ್ಯ ಈರಣ್ಣ ಕದಡಿ, ಹಿರಿಯ ಐ.ಎ.ಎಸ್. ಅಧಿಕಾರಿ ಅಶೋಕ್ ದಳವಾಯಿ, ಸುಹಾಸ್ ಯತಿರಾಜ್, ಎಂ ಸಿ ಯ ಅಧ್ಯಕ್ಷ ಮುನಿಕೃಷ್ಣ, ನಿರ್ದೇಶಕ ಹೆಚ್.ಆರ್. ತೀರ್ಥೇಶ್, ವ್ಯವಸ್ಥಾಪಕ ನಿರ್ದೇಶಕ ಸಿದ್ಧಲಿಂಗಪ್ಪ ಬಿ ಪೂಜಾರಿ ಮತ್ತು ನಿರ್ದೇಶಕ ವೀರೇಶ ಸಂಗಳದ ಸೇರಿದಂತೆ ಇತರ ನಿರ್ದೇಶಕರುಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post