ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರೈತರಿಗೆ ನೆರವಾಗುವ ಉದ್ದೇಶದಿಂದ ರೂಪಿಸಲಾಗಿರುವ 100 ಕಿಸಾನ್ ಡ್ರೋಣ್’ಗೆ ಪ್ರಧಾನಿ ನರೇಂದ್ರ ಮೋದಿ #PM Narendra Modi ಇಂದು ಚಾಲನೆ ನೀಡಿದ್ದಾರೆ.
ಡ್ರೋಣ್’ಗೆ #Drone ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ದೇಶದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಹೊಸ ಅಧ್ಯಾಯ ಆರಂಭವಾಗಿದೆ. 100 ಕಿಸಾನ್ ಡ್ರೋಣ್’ಗೆ #Kisan Drone ಚಾಲನೆ ನೀಡಲಾಗಿದ್ದು, ಕೃಷಿ ಕ್ಷೇತ್ರವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಉನ್ನತಿಗೆ ಕೊಂಡೊಯ್ಯಲು ಇದು ದಾರಿಯಾಗಿದೆ ಎಂದಿದ್ದಾರೆ.
Also read: ರೈಲಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ರಾಕ್ಷಸ
ಕೀಟನಾಶಕ ಸಿಂಪಡನೆ, ತರಕಾರಿ ಹಾಗೂ ಹಣ್ಣು ಸಾಗಾಣಿಕೆ ಸೇರಿದಂತೆ ಹಲವು ಕೃಷಿ ಕೆಲಸಗಳಿಗೆ ಇದು ಪ್ರಯೋಜನಕಾರಿಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಮುಂದಿನ 2 ವರ್ಷದಲ್ಲಿ 1 ಲಕ್ಷ ಡ್ರೋಣ್ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದ್ದು, ಈ ಮೂಲಕ ಹೊಸ ಉದ್ಯೋಗವೂ ಸಹ ಸೃಷ್ಠಿಯಾಗಲಿದೆ. ಇದಕ್ಕೆ ಸಹಕಾರ ನೀಡುತ್ತಿರುವ ಗರುಡ ಏರ್ ಸ್ಪೇಸ್ ಕಂಪೆನಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post