ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ರಾಜ್ಯದ ಹೊಯ್ಸಳರ ಕಾಲದ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಮಾಡಲು ನಾಮನಿರ್ದೇಶನ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
The most exquisite Hoysala Temples of Belur, Halebid & Somnathapura in Karnataka have been finalised as India’s nomination for consideration as World Heritage for the year 2022-2023.
The ‘Sacred Ensembles of the Hoysala’ are on the @UNESCO’s Tentative list since 15th April, 2014 pic.twitter.com/rtVAS3VQnc
— G Kishan Reddy (@kishanreddybjp) January 31, 2022
ಈ ಕುರಿತಂತೆ ಟ್ವೀಟ್ ಮಾಡಿರುವ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಅಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ, ಕರ್ನಾಟಕದಲ್ಲಿರುವ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಹೊಯ್ಸಳ ದೇವಾಲಯಗಳನ್ನು ಭಾರತವು 2022-2023ನೆಯ ಸಾಲಿನ ವಿಶ್ವ ಪರಂಪರೆಯ ಪಟ್ಟಿಗೆ ನಾಮನಿರ್ದೇಶನಗೊಳಿಸಿದೆ ಎಂದು ತಿಳಿಸಿದ್ದಾರೆ.
ಹೊಯ್ಸಳರ ಕಾಲದ ಈ ಪವಿತ್ರ ಸ್ಥಳಗಳು 2014ರ ಎಪ್ರಿಲ್ 15ರಿಂದಲೂ ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿದ್ದು, ನಮ್ಮ ದೇಶದ ಶ್ರೀಮಂತ ಇತಿಹಾಸ ಹಾಗೂ ಸಾಂಸ್ಕೃತಿ ಪರಂಪರೆಗೆ ಸಾಕ್ಷಿಯಾಗಿವೆ ಎಂದಿದ್ದಾರೆ.
ಇನ್ನು, ಯುನೆಸ್ಕೋದಲ್ಲಿನ ಭಾರತದ ಖಾಯಂ ಪ್ರತಿನಿಧಿ ವಿಶಾಲ್ ವಿ. ಶರ್ಮಾ ಅವರು ಔಪಚಾರಿಕವಾಗಿ ಹೊಯ್ಸಳ ದೇವಾಲಯಗಳ ನಿರ್ದೇಶನವನ್ನು ಯುನೆಸ್ಕೋ ವಿಶ್ವ ಪರಂಪರೆಯ ನಿರ್ದೇಶಕ ಲಾಜರೆ ಎಲೌಂಡ್ ಅವರಿಗೆ ಸಲ್ಲಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಶರ್ಮಾ ಅವರು, ಹೊಯ್ಸಳರ ಪವಿತ್ರ ಸ್ಥಳಗಳನ್ನು ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ನಾಮನಿರ್ದೇಶನ ಮಾಡಲು ಭಾರತವು ಹೆಮ್ಮೆ ಪಡುತ್ತದೆ. ಕಲಾ ಇತಿಹಾಸಕಾರರು ಏಷ್ಯನ್ ಕಲೆಯ ಮೇರುಕೃತಿಗಳಲ್ಲಿ ಮೇಳಗಳ ಅಸಾಧಾರಣ ಶಿಲ್ಪಕಲೆ ಕಲಾತ್ಮಕತೆಯನ್ನು ಗುರುತಿಸುತ್ತಾರೆ ಎಂದಿದ್ದಾರೆ.
ನಾಮನಿರ್ದೇಶನ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಇದೇ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್’ನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ದಾಖಲೆ ಪತ್ರಗಳ ಪ್ರಕ್ರಿಯೆ ಮುಂದಿನ ಜುಲೈ ಅಥವಾ ಆಗಸ್ಟ್’ನಲ್ಲಿ ನಡೆಯಲಿದೆ ಎಂದಿದ್ದಾರೆ.
ಏನಿದು ವಿಶ್ವ ಪರಂಪರೆಯ ತಾಣ ಪಟ್ಟಿ?
ವಿಶ್ವ ಪರಂಪರೆಯ ತಾಣ ಪಟ್ಟಿಯು ವಿಶ್ವದ ಅತ್ಯಂತ ಪ್ರತಿಷ್ಠಿತ ಹಾಗೂ ಮಹತ್ವದ ಪರಿಗಣನೆಯಾಗಿದೆ. ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸ್ಥಳ/ಸಂಸ್ಥೆಗಳನ್ನು ಕಾನೂನಾತ್ಮಕವಾಗಿ ರಕ್ಷಿಸಲು ವಿಶ್ವಸಂಸ್ಥೆ ತೆಗೆದುಕೊಂಡು ಮಹತ್ವದ ಹೆಜ್ಜೆಯಾಗಿದೆ.
ಸಾಂಸ್ಕೃತಿಕ, ಐತಿಹಾಸಿಕ, ವೈಜ್ಞಾನಿಕ ಅಥವಾ ಇತರ ರೀತಿಯ ಪ್ರಾಮುಖ್ಯತೆಗಾಗಿ ವಿಶ್ವ ಪರಂಪರೆಯ ತಾಣಗಳನ್ನು ಯುನೆಸ್ಕೋ ಗೊತ್ತುಪಡಿಸಿದೆ. ಇಂತಹ ಸ್ಥಳಗಳನ್ನು ಆಯ್ಕೆ ಮಾಡಲು ವಿಶ್ವ ಪರಂಪರೆಯ ತಾಣವು ಭೌಗೋಳಿಕವಾಗಿ ಮತ್ತು ಐತಿಹಾಸಿಕವಾಗಿ ಗುರುತಿಸಬಹುದಾದ, ವಿಶೇಷ ಸಾಂಸ್ಕೃತಿಕ ಅಥವಾ ಭೌತಿಕ ಪ್ರಾಮುಖ್ಯತೆಯನ್ನು ಹೊಂದಿರುವ ವಿಶಿಷ್ಟ ಹೆಗ್ಗುರುತಾಗಿರಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post