ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸಂಸತ್ ಭವನದ ಮೇಲೆ ಉಗ್ರರು ದಾಳಿ ನಡೆದು ಇಂದಿಗೆ 22 ವರ್ಷವಾದ ಬೆನ್ನಲ್ಲೇ ಇಬ್ಬರು ಅಪರಿಚಿತರು ಸಂಸತ್ ಭವನಕ್ಕೆ ನುಗ್ಗಿ, ಲೋಕಸಭಾ ಕಲಾಪದ ಸದನದೊಳಗೆ ಟಿಯರ್ ಗ್ಯಾಸ್ ಸಿಡಿಸಿರುವ Attack on Parliament with tear gas ಆಘಾತಕಾರಿ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಸಂಸತ್ ಭವನಕ್ಕೆ ಪಾಸ್ ಹೊಂದಿದ್ದ ಇಬ್ಬರು ಏಕಾಏಕಿ ಲೋಕಸಭಾ ಸದನಕ್ಕೆ ನುಗ್ಗಿದ್ದು, ಕಲಾಪ ನಡೆಯುತ್ತಿದ್ದ ವೇಳೆ ಟಿಯರ್ ಗ್ಯಾಸ್ ಸಿಡಿಸಿದ್ದಾರೆ.
ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದು ಇಂದಿಗೆ 22 ವರ್ಷವಾಗಿದೆ. ಇದೇ ದಿನ ಲೋಕಸಭಾ ಕಲಾಪ ನಡೆಯುವ ಸದನದಲ್ಲೇ ಇಂತಹ ಆಘಾತಕಾರಿ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
Also read: ದುಷ್ಕೃತ್ಯಕ್ಕೆ ಸಂಚು | ಬೆಂಗಳೂರಿನಲ್ಲಿ 12 ಕಡೆ ಎನ್’ಐಎ ದಾಳಿ | ಪರಿಶೀಲನೆ
ಓರ್ವ ಯುವಕ ಹಾಗೂ ಯವತಿ ಸಂಸತ್ ಭವನ ಪ್ರವೇಶದ ಪಾಸ್ ಹೊಂದಿದ್ದರು. ಈ ಇಬ್ಬರೂ ಸಂಸತ್ ಭವನ ಪ್ರವೇಶಿಸಿದ್ದು, ಲೋಕಸಭಾ ಕಲಾಪದ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಇಲ್ಲಿಂದ ಏಕಾಏಕಿ ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ಸದನದ ಒಳಗೆ ಹಾರಿ ಟಿಯರ್ ಗ್ಯಾಸ್ ಸಿಡಿಸಿದ್ದಾರೆ.
ಇಬ್ಬರು ಯುವಕರು ಖಲಿಸ್ಥಾನಿ ಉಗ್ರರ ಬೆಂಬಲಿಗರು ಎಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post