ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕಾಶ್ಮೀರದ ಅಮರನಾಥ ದೇಗುಲದ Amarnatha temple ಬಳಿಯಲ್ಲಿ ಸಂಭವಿಸಿದ ಅನಾಹುತಕ್ಕೆ ಅತಿಯಾದ ಮಳೆ ಕಾರಣವೇ ಹೊರತು ಮೇಘಸ್ಪೋಟವಲ್ಲ (Cloud burst) ಎಂದು ಹೇಳಲಾಗಿದೆ.
ಈ ಕುರಿತಂತೆ ಹವಾಮಾನ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಶುಕ್ರವಾರ ಸಂಜೆ 4.30 ರಿಂದ 6.30ರ ನಡುವೆ ದೇಗುಲದ ಆವರಣದಲ್ಲಿ 31 ಮಿಮೀ ಮಳೆಯಾಗಿದೆ. ಇದು ಮೋಡದ ಸ್ಫೋಟ ಎಂದು ವರ್ಗೀಕರಿಸಲು ಸಾಕಷ್ಟು ಕಡಿಮೆ ಪ್ರಮಾಣದ ಮಳೆಯಾಗಿದೆ.
ಅಮರನಾಥ ಗುಹೆ ದೇಗುಲದ ಸಮೀಪವಿರುವ ಪರ್ವತಗಳ ಎತ್ತರದ ಪ್ರದೇಶಗಳಲ್ಲಿ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಬಹುದು ಎಂದಿದೆ.
Also read: ಸಾಗರ: ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಕಲ್ಪಿಸಲು ಶಾಸಕ ಹಾಲಪ್ಪ ಸೂಚನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post