ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಂದನ್ Shivamogga Nandan ಅವರಿಗೆ ಪ್ರತಿಷ್ಠಿತ ಕರ್ನಾಟಕ ಛಾಯಾರತ್ನ ಪ್ರಶಸ್ತಿಯ ಗೌರವ ನೀಡಲಾಗಿದೆ.
ಕರ್ನಾಟಕ ವೀಡಿಯೋ ಮತ್ತು ಫೋಟೋ ಅಸೋಸಿಯೇಷನ್ ಹಾಗೂ ಬೈ ಸೇಲ್ ಇನ್ಟ್ರಾಂಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಈ ಗೌರವ ನೀಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಫೋಟೋ ಟುಡೆ ವಸ್ತು ಪ್ರದರ್ಶನದಲ್ಲಿ ನಂದನ್ ಅವರನ್ನು ಗೌರವಿಸಲಾಯಿತು.
ನಂದನ್ ಅವರು, ಫೋಟೋಗ್ರಫಿ ಮತ್ತು ಪತ್ರಿಕಾ ಛಾಯಾಗ್ರಹಣದಲ್ಲಿ ಸಲ್ಲಿಸುತ್ತಿರುವ ಅಭೂತಪೂರ್ವ ಸೇವಾ ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಹಿರಿಯರಾದ ಶಿವಮೊಗ್ಗ ನಂದನ್ ಅವರನ್ನು ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post