ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಚೀನಾದ ಮಕ್ಕಳಲ್ಲಿ ಉಸಿರಾಟದ ಖಾಯಿಲೆ ಹಾಗೂ ನ್ಯುಮೋನಿಯಾ Pneumonia ಪ್ರಕರಣಗಲು ಉಲ್ಬಣಗೊಂಡಿದ್ದು, ಅಲ್ಲಿನ ಆಸ್ಪತ್ರೆಗಳು ಮಕ್ಕಳಿಂದಲೇ ತುಂಬಿ ಹೋಗಿರುವುದು ಮತ್ತೊಂದು ಕೋವಿಡ್ ರೀತಿಯ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆಯಾ ಎಂಬ ಆತಂಕ ಮೂಡಿದೆ.
ಚೀನಾದಲ್ಲಿ China ಮಕ್ಕಳಲ್ಲಿ ಉಸಿರಾಟದ ಖಾಯಿಲೆಗಳು ಮತ್ತು ನ್ಯುಮೋನಿಯಾ ಪ್ರಕರಣಗಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಸಂಪೂರ್ಣ ವರದಿ ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಆ ದೇಶವನ್ನು ಕೋರಿದೆ.
ಬೀಜಿಂಗ್ ಸೇರಿದಂತೆ ದೇಶದಾದ್ಯಂತದ ನಗರಗಳಲ್ಲಿ ನ್ಯುಮೋನಿಯಾ ಉಲ್ಬಣಗೊಳ್ಳುತ್ತಿದ್ದಂತೆ ಚೀನಾದ ಆಸ್ಪತ್ರೆಗಳು ಅನಾರೋಗ್ಯದ ಮಕ್ಕಳಿಂದ ತುಂಬಿಹೋಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Also read: ಕಾರವಾರ ಪೊಲೀಸರ ಬೇಟೆ: 8 ಲಕ್ಷ ರೂ. ಮೌಲ್ಯದ ಚಿನ್ನದ ಜೊತೆ ಅಂತಾರಾಜ್ಯ ಕಳ್ಳರ ಬಂಧನ
ಪ್ರಮುಖವಾಗಿ ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿಗಳು ಹೇಳಿಕೆ ಬಿಡುಗಡೆ ಮಾಡಿದ್ದು, ಮಕ್ಕಳಲ್ಲಿ ಉಸಿರಾಟದ ಖಾಯಿಲೆಗಳು ಹೆಚ್ಚಳವಾಗಿವೆ ಎಂದು ಹೇಳಿದ್ದಾರೆ.
ಕಾರಣವೇನು?
ಚೀನಾದಲ್ಲಿ ಕೋವಿಡ್19 ನಿರ್ಬಂಧಗಳನ್ನು ಹಿಂಪಡೆದಿರುವುದು, ಇನ್ಫ್ಲುಯೆನ್ಸಾ, ಮೈಕೋಪ್ಲಾಸ್ಮಾ ನ್ಯುಮೋನಿಯಾ (ಸಾಮಾನ್ಯವಾಗಿ ಕಿರಿಯ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ಬ್ಯಾಕ್ಟೀರಿಯಾದ ಸೋಂಕು), ಉಸಿರಾಟದ ಸಿನ್ಸಿಟಿಯಲ್ ವೈರಸ್ ಮತ್ತು ಎಸ್’ಎಆರ್’ಎಸ್ ಸಿಒವಿ ರೋಗಕಾರಕಗಳು ಹೆಚ್ಚಾಗಲು ಕಾರಣವಾಗಿವೆ ಎಂದು ಹೇಳಲಾಗಿದೆ.
ಈ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ವರದಿ ಬಿಡುಗಡೆ ಮಾಡಿದ್ದು, ಅಕ್ಟೋಬರ್ ಮಧ್ಯದಿಂದ, ಉತ್ತರ ಚೀನಾ ಹಿಂದಿನ ಮೂರು ವರ್ಷಗಳಲ್ಲಿ ಇದೇ ಅವಧಿಗೆ ಹೋಲಿಸಿದರೆ ಇನ್ಫ್ಲುಯೆನ್ಸಾ ತರಹದ ಅನಾರೋಗ್ಯದ ಹೆಚ್ಚಳವಾಗಿದೆ ಎಂದಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಳೇನು?
- ಅನಾರೋಗ್ಯದಿಂದ ಬಳಲುತ್ತಿರುವ ಜನರಿಂದ ಅಂತರ ಕಾಯ್ದುಕೊಳ್ಳಿ
- ಅನಾರೋಗ್ಯದ ಸಂದರ್ಭದಲ್ಲಿ ಮನೆಯಲ್ಲಿಯೇ ಇರುವುದು
- ಅಗತ್ಯವಿರುವ ಪರೀಕ್ಷೆ, ವೈದ್ಯಕೀಯ ಆರೈಕೆಯನ್ನು ಪಡೆಯುವುದು
- ಹೊರಗೆ ಹೋಗುವಾದ ಸೂಕ್ತವಾದ ಮಾಸ್ಕ್ ಧರಿಸುವುದು
- ನಿಯಮಿತವಾಗಿ ಕೈ ತೊಳೆಯಿರಿ
- ಆರೋಗ್ಯಕರವಾದ ಆಹಾರಗಳನ್ನು ಸೇವಿಸಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post