ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ತಬ್ಲಿಘಿ ಜಮಾತ್’ಗೆ ಹೋಗಿದ್ದ 9 ಮಂದಿ ಇಂದು ಶಿವಮೊಗ್ಗ ನಗರಕ್ಕೆ ವಾಪಾಸ್ ಬಂದಿದ್ದು, ಅವರನ್ನೆಲ್ಲಾ ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ.
ಮಾರ್ಚ್ 5ರಂದು ಗುಜರಾತ್’ನ ಅಹಮದಾಬಾದ್’ಗೆ ದಾವಣಗೆರೆಯಿಂದ ರೈಲಿನ ಮೂಲಕ ಇವರೆಲ್ಲಾ ತೆರಳಿದ್ದರು. ಜಮಾತೆಯಲ್ಲಿ ಭಾಗವಹಿಸಿದ ನಂತರ ಮಸೀದಿಯೊಂದರಲ್ಲಿ ಇವರೆಲ್ಲಾ ಆಶ್ರಯ ಪಡೆದಿದ್ದರು. ಅಲ್ಲದೇ, ಲಾಕ್ ಡೌನ್ ವೇಳೆ ಗುಜರಾತ್ ಸರ್ಕಾರ ಇವರನ್ನೆಲ್ಲಾ ಕ್ವಾರಂಟೈನ್’ನಲ್ಲಿ ಇರಿಸಿತ್ತು. ಅಲ್ಲಿನ ಸರ್ಕಾರದ ಅನುಮತಿ ಮೇರೆಗೆ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ.
ಅಹಮದಾಬಾದ್-ಮುಂಬೈ ಬೆಳಗಾವಿ ಗಡಿಯ ಮೂಲಕ ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣಕ್ಕೆ ತಲುಪಿರುವ ತಬ್ಲಿಘಿಗಳನ್ನು ಸಂಫೂರ್ಣ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಲ್ಲಾಡಳಿತದ ಆದೇಶದಂತೆ ಇವರನ್ನೆಲ್ಲಾ ಸ್ಕ್ರೀನಿಂಗ್ ನಡೆಸಿ ವೈದ್ಯಕೀಯ ಪರೀಕ್ಷೆ ಒಳಪಡಿಸುತ್ತಿದ್ದಾರೆ.
9 ಜನರಲ್ಲಿ ಶಿಕಾರಿಪುರ ತಾಲೂಕಿನವರೇ ಹೆಚ್ಚಿನ ತಬ್ಲಿಘಿಗಳು ಎಂದು ತಿಳಿದುಬಂದಿದೆ. ಇವರನ್ನೆಲ್ಲಾ ಬಾಪೂಜಿ ನಗರದ ಆಸ್ಪತ್ರೆಯಲ್ಲಿ ಕ್ವಾರಂಟೈನ್’ನಲ್ಲಿ ಇರಿಸಲಾಗುತ್ತಿದೆ.
Get in Touch With Us info@kalpa.news Whatsapp: 9481252093
Discussion about this post