ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರ ಪ್ರದೇಶದಲ್ಲಿ ಸುಗಮ ಸಂಚಾರ ಹಾಗೂ ಸಾರ್ವಜನಿಕರಿಗೆ ತೊಂದರೆಯಾದಂತೆ ಕ್ರಮ ಕೈಗೊಳ್ಳಲು ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದು, ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ತಡೆಯಾಜ್ಞೆಯನ್ನು ಜಾರಿಗೊಳಿಸುವುದು ಹಾಗೂ ಬಹುಹಂತದ ಕಾರ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳ ಪಾರ್ಕಿಂಗ್ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಿದ್ದಾರೆ.
ಎಲ್ಲೆಲ್ಲಿ ನೋ ಪಾರ್ಕಿಂಗ್?
ನಗರದ ಪ್ರಮುಖ ರಸ್ತೆಗಳಾದ ಬಿಹೆಚ್ ರಸ್ತೆ(ರಾಯಲ್ ಆರ್ಕಿಡ್’ನಿಂದ ಕರ್ನಾಟಕ ಸಂಘ ಸಿಗ್ನಲ್’ವರೆಗೆ) ಶಿವಪ್ಪನಾಯಕ ಪ್ರತಿಮೆಯಿಂದ ಗಾಂಧಿ ಬಜಾರ್ ನಾಲ್ಕನೇ ಅಡ್ಡರಸ್ತೆವರೆಗೆ, ಗೋಪಿ ವೃತ್ತದಿಂದ ಅಮೀರ್ ಅಹ್ಮದ್ ವೃತ್ತದವರೆಗೆ, ಹಳೇ ತೀರ್ಥಹಳ್ಳಿ ರಸ್ತೆ, ಎಂಕೆಕೆ ರಸ್ತೆ, ಕೆಆರ್ ಪುರಂ ರಸ್ತೆಗಳಲ್ಲಿ ವಾಹನದ ದಟ್ಟಣೆ ಅಧಿಕವಾಗಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತಿರುವ ಹಿನ್ನೆಲೆ ಈ ಕೆಳಕಂಡಂತೆ ವಾಹನ ನಿಲುಗಡೆ ಕುರಿತು ಹಾಗೂ ಪಾಲಿಕೆಯಿಂದ ನಿರ್ವಹಿಸುತ್ತಿರುವ ಬಹುಹಂತದ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಆದೇಶಿಸಿರುತ್ತಾರೆ.

ಮಹಾನಗರ ಪಾಲಿಕೆ ಕಾಂಪ್ಲೆಕ್ಸ್ ಪ್ರಾರಂಭದಿಂದ(ಕುಚಲಕ್ಕಿ ಕೇರಿ ಎದುರಿನಿಂದ ಕೋಕಿಲಾ ರೇಡಿಯೋ ಅಂಗಡಿಯವರೆಗೆ ಎಡಬದಿಯಲ್ಲಿ ದ್ವಿಚಕ್ರ ಪಾರ್ಕಿಂಗ್. ಸಂಗಮ್ ಟೈಲರ್ ಶಾಪ್’ನಿಂದ ಡಯಟ್ ಕಾಲೇಜ್ ಕ್ರಾಸ್(ಸಾವಕರ್ರ ನಗರ ಕ್ರಾಸ್)ವರೆಗೆ ಬಲ ಬದಿಯಲ್ಲಿ ದ್ವಿಚಕ್ರ ಪಾರ್ಕಿಂಗ್.
ನಾಲ್ಕು ಚಕ್ರದ ವಾಹನ ನಿಲುಗಡೆ ನಿಷೇಧ
ಬಿಎಚ್ ರಸ್ತೆ: ಅಮೀರ್ ಅಹ್ಮದ್ ಸರ್ಕಲ್ ವೆಂಕಟೇಶ್ವರ ಸ್ವೀಟ್ ಹೌಸ್’ನಿಂದ ಕರ್ನಾಟಕ ಸಂಘ ಸರ್ಕಲ್’ವರೆಗೆ ರಸ್ತೆಯ ಎಡಬಲ ಬದಿಯಲ್ಲಿ.
ಗಾಂಧಿ ಬಜಾರ್ ಮುಖ್ಯ ರಸ್ತೆ
ಶಿವಪ್ಪನಾಯಕ ಸರ್ಕಲ್’ನಿಂದ ಗಾಂಧಿಬಜಾರ್ 02ನೇ ಕ್ರಾಸ್’ವರೆಗೆ ರಸ್ತೆಯ ಎರಡು ಬದಿಯಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ನಿಲುಗಡೆ ನಿಷೇಧ.
ನೆಹರು ರಸ್ತೆ
ನೆಹರು ರಸ್ತೆಯಲ್ಲಿ ಗೋಪಿ ಸರ್ಕಲ್’ನಿಂದ ಅಮೀರ್ ಅಹ್ಮದ್ ಸರ್ಕಲ್’ವರೆಗೆ ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ವಾಹನಗಳ ಪಾರ್ಕಿಂಗ್ ಸಲುವಾಗಿ ಅಭಿವೃದ್ದಿಪಡಿಸಿರುವ ಕನ್ಸರ್ವೆನ್ಸಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಜಾರಿಯಾದ ನಂತರ ಈ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ನಿಷೇಧ ಮಾಡಲಾಗಿದ್ದು ಈ ಅಧಿಸೂಚನೆಯನ್ನು ನ.11 ರಂದು ಹೊರಡಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post