ಕಲ್ಪ ಮೀಡಿಯಾ ಹೌಸ್ | ವೈಟ್ ಫೀಲ್ಡ್, ಬೆಂಗಳೂರು |
ಕಿಡ್ನಿ ಕ್ಯಾನ್ಸರ್’ಗೆ #KidneyCancer ಆಪರೇಷನ್ ಮಾಡಿಸಿದ ಒಂದು ವರ್ಷದ ಬಳಿಕ ಕಾಣಿಸಿಕೊಂಡ ನೋವಿಗೆ ಕಾರಣವೇನೆಂದು ತಿಳಿಯಲು ಸುಮಾರು ಆಸ್ಪತ್ರೆ ಸುತ್ತುತ್ತಿದ್ದ ವೃದ್ದನಿಗೆ ವೈಟ್ ಫೀಲ್ಡ್’ನಲ್ಲಿರುವ ಮೆಡಿಕವರ್ ಆಸ್ಪತ್ರೆಯಲ್ಲಿ #MedicoverHospital ಪರಿಹಾರ ನೀಡುವ ಮೂಲಕ ಅಪರೂಪದ ಸಾಧನೆ ಮಾಡಿದೆ.
ಹಿನ್ನೆಲೆಯೇನು?
ಪಶ್ವಿಮ ಬಂಗಾಳ ಮೂಲದ 68 ವರ್ಷದ ವೃದ್ದನಿಗೆ ವರ್ಷದ ಹಿಂದೆ ಕಿಡ್ನಿ ಕ್ಯಾನ್ಸರ್’ಗೆ ಆಪರೇಷನ್ ಮಾಡಲಾಗಿತ್ತು. ಮುಂಬೈಯಲ್ಲಿ ಆಪರೇಷನ್ ನಡೆಸಿ ಒಂದು ವರ್ಷದ ಬಳಿಕ ಮೂತ್ರ ವಿಸರ್ಜನೆ ಮಾಡುವಾಗ ಸಾಕಷ್ಟು ನೋವು ಕಂಡು ಬಂದಿತ್ತು. ಆದರೆ ಅದಕ್ಕೆ ಕಾರಣವೇನು ಎಂದು ತಿಳಿಯಲು ಬಹುತೇಕ ಆಸ್ಪತ್ರೆಗಳಿಗೆ ಸುತ್ತಿದರೂ ಸಹ ತಿಳಿದು ಬಂದಿಲ್ಲ.
ಬಳಿಕ ಮೆಡಿಕವರ್ ಆಸ್ಪತ್ರೆಗೆ ಬಂದು ಇಲ್ಲಿನ ರೋಬೋಟಿಕ್ ತಜ್ಞ #RoboticsSpecialist ಡಾ. ಪ್ರಮೋದ್ ಅವರನ್ನು ಭೇಟಿ ಮಾಡಿದರು.
ಬಯೋಸ್ಪಿ ಮಾಡಿಸಿದ ಬಳಿಕ ನೋವಿಗೆ ಕಾರಣವೇನು ಎಂದು ತಿಳಿದುಬಂದಿದೆ. ಆಪರೇಷನ್ ಮಾಡಿ ಒಂದು ವರ್ಷದ ಬಳಿಕ ಮತ್ತೆ ಯೂರಿನ್ ಚೀಲದಲ್ಲಿ ಕ್ಯಾನ್ಸರ್ ಇರುವುದನ್ನು ಡಾ. ಪ್ರಮೋದ್ ವೃದ್ದನಿಗೆ ತಿಳಿಸಿದರು.
ಬಳಿಕ ಬೇರೆ ವೈದ್ಯರ ಸಲಹೆ ಪಡೆಯಲು ಮುಂಬೈನ ಹೆಸರಾಂತ ಕ್ಯಾನ್ಸರ್ ಆಸ್ಪತ್ರೆಗೆ ತೆರಳಿದರು. ಆದರೆ ಅಲ್ಲಿ ವೃದ್ದನಿಗೆ ಓಪನ್ ಸರ್ಜರಿ #OpenSurgery ನಡೆಸಲು ಸಲಹೆ ನೀಡಿದರು. ಅದಕ್ಕೆ ಒಪ್ಪದ ವೃದ್ದ ಓಪನ್ ಸರ್ಜರಿ ಬೇಡ, ರೋಬೋಟಿಕ್ ಸರ್ಜರಿ ಬೇಕೆಂದು ಮೆಡಿಕವರ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರು.
Also Read>> ಸಿ.ಟಿ. ರವಿ ವಿರುದ್ಧ ದಾಖಲೆ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್ | ಬಿಜೆಪಿಗೆ ಸವಾಲ್
ಸರ್ಜರಿ ಸ್ವಲ್ಪ ರಿಸ್ಕ್ ಇತ್ತು. ಯಾಕೆಂದರೆ ಅವರಿಗೆ ಕ್ಯಾನ್ಸರ್ ಕಾರಣದಿಂದ ಒಂದು ಕಿಡ್ನಿ ತೆಗೆಯಲಾಗಿದ್ದು, ಇನ್ನೊಂದು ಮಾತ್ರ ಇತ್ತು. ಇದ್ದ ಒಂದು ಕಿಡ್ನಿಕೂಡ ವೀಕ್ ಇತ್ತು. ಸಾಮಾನ್ಯವಾಗಿ ಕಿಡ್ನಿ ಕ್ರಿಯೇಟನೈನ್ 1.3 ಇರಬೇಕು. ಆದರೆ ಇವರಿಗೆ ಕಿಡ್ನಿ ಕ್ರಿಯೆಟಿನೈನ್ #KidneyCreatinine 2.5 ಇತ್ತು ಹಾಗೂ ಹಿಮೋಗ್ಲೋಬಿನ್ #Hemoglobin ಕೂಡ ಕಡಿಮೆ ಇತ್ತು. ಮೊದಲೇ ಅವರಿಗೆ ಪದೇ ಪದೇ ಮೂತ್ರ ವಿಸರ್ಜನೆಯಾಗ್ತಾ ಇದ್ದು, ಸಿಕ್ಕಾಪಟ್ಟೆ ನೋವು ಅನುಭವಿಸಿದ್ದರು. ಹಾಗಾಗೀ ಡಾ. ಪ್ರಮೋದ್ ರೋಬೊಟಿಕ್ ಸರ್ಜರಿ #RoboticSurgery ಮುಖಾಂತರ ಕ್ಯಾನ್ಸರನ್ನು ಗುಣಮುಖ ಮಾಡಿದರು.
ಹೇಗೆ ನಡೆದಿತ್ತು?
ಕಿಡ್ನಿ ಪೈಪನ್ನು ಕರುಳಿನ ಒಂದು ಭಾಗಕ್ಕೆ ಜಾಯಿಂಟ್ ಮಾಡಿ, ಕಿಬ್ಬೊಟ್ಟೆಯ ವಾಲ್’ಗೆ ಸೇರಿಸಲಾಗಿತ್ತು. ಕರುಳಿನ ಒಂದು ಭಾಗವನ್ನು ತೆಗೆದು ಯೂರಿನ್ ಬರುವುದಕ್ಕೆ ಕೃತಕ ಮೂತ್ರಕೋಶವನ್ನು ಕ್ರಿಯೇಟ್ ಮಾಡಲಾಗಿತ್ತು.
ರೋಬೋಟಿಕ್ ಸರ್ಜರಿ ನಡೆಸಿದರೆ ಶಸ್ತ್ರಚಿಕಿತ್ಸೆ ವೇಳೆ ರಕ್ತಸ್ರಾವ ಇರುವುದಿಲ್ಲ, ಆದರೆ, ಓಪನ್ ಸರ್ಜರಿ ನಡೆಸಿದರೆ ಸಾಕಷ್ಟು ರಕ್ತಸ್ರಾವವಾಗುತ್ತದೆ. ಅಲ್ಲದೇ ರೋಬೊಟಿಕ್ ಸರ್ಜರಿ ನಡೆಸಿ ನಾಲ್ಕೆ ದಿನದಲ್ಲಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಓಪನ್ ಸರ್ಜರಿ ನಡೆಸಿದರೆ ರಿಕವರಿ ಟೈಮ್ ಕೂಡ ಹೆಚ್ಚು ಇರುತ್ತದೆ. ರೋಬೊಟಿಕ್ ಸರ್ಜರಿ ನಡೆಸಿದ ಬಳಿಕ ವೃದ್ದನಲ್ಲಿ ಯಾವುದೇ ರೀತಿಯ ನೋವು ಕಂಡುಬಂದಿಲ್ಲ ಎಂದು ಡಾ. ಪ್ರಮೋದ್ ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post