ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಎನ್‌ಡಿಎ ಸರ್ಕಾರದ ವಿರುದ್ದ ಇದೇ ಮೊದಲ ಬಾರಿಗೆ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ನಾಳೆ ಮಂಡಿಸಲಿದ್ದು, ಎಲ್ಲ ಪಕ್ಷಗಳಿಗೆ ಮಾತನಾಡಲು ಸಮಯಾವಕಾಶವನ್ನು ನಿಗದಿಗೊಳಿಸಲಾಗಿದೆ.
ಸಂಸತ್ ಕೆಳಮನೆಯಲ್ಲಿ ನಾಳೆ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದ್ದು, ಎಲ್ಲ ಪಕ್ಷಗಳಿಗೆ ಅಭಿಪ್ರಾಯ ಮಂಡಿಸಲು ಸಮಯವನ್ನು ನಿಗದಿ ಮಾಡಿ ಸ್ಪೀಕರ್ ಆದೇಶಿಸಿದ್ದಾರೆ.
ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತನಾಡಲು 3 ಗಂಟೆ 33 ನಿಮಿಷಗಳ ಕಾಲ ಸಮಯವನ್ನು ನಿಗದಿ ಮಾಡಿದ್ದು, ಕಾಂಗ್ರೆಸ್‌ಗೆ 38 ನಿಮಿಷ ನೀಡಲಾಗಿದೆ.
ಇನ್ನು, ಮಮತಾ ಬ್ಯಾನರ್ಜಿ ಅವರ ಟಿಎಂಸಿಗೆ 27 ನಿಮಿಷ, ತಮಿಳುನಾಡಿನ ಎಐಎಡಿಎಂಕೆಗೆ 29 ನಿಮಿಷ, ಒಡಿಶಾದ ಬಿಜೆಡಿಗೆ 15 ನಿಮಿಷ, ಶಿವಸೇನೆಗೆ 14 ನಿಮಿಷ, ಟಿಡಿಪಿಗೆ 13 ನಿಮಿಷ, ಟಿಆರ್‌ಎಸ್‌ಗೆ 9 ನಿಮಿಷ, ಸಿಪಿಐಎಂಗೆ 7 ನಿಮಿಷ, ಸಮಾಜವಾದಿ ಪಕ್ಷಕ್ಕೆ 6 ನಿಮಿಷ, ಎನ್‌ಸಿಪಿಗೆ 6 ನಿಮಿಷ ಹಾಗೂ ಎಲ್‌ಜೆಎಸ್‌ಪಿಗೆ 5 ನಿಮಿಷ ಕಾಲಾವಕಾಶವನ್ನು ನಿಗದಿಗೊಳಿಸಲಾಗಿದೆ.
Discussion about this post