ಹಲವಾರು ರಾಜಕೀಯ ಖೈದಿಗಳಿಗೆ ಕ್ಷಮಾದಾನ ನೀಡಿ 2012ರಲ್ಲಿ ದೇಶದಾದ್ಯಂತ ಇರುವ ಹಲವು ಜೈಲುಗಳಿಂದ ಬಿಡುಗಡೆಗೊಳಿಸಿ ತನ್ನ ಪರವಾಗಿ ಕೆಲಸ ಮಾಡಲು ನಿಯೋಜಿಸಿದ ಆರೋಪ ಕೂಡ ಹೊರಿಸಲಾಯಿತು. ರಾಜಕೀಯ ಪಂಡಿತರು ಜಾಂಗ್-ಸಂಗ್-ತೇಕ್ ಬಹಳ ಮಹತ್ವಾಕಾಂಕ್ಷೆ ಹೊಂದಿದ್ದ ವ್ಯಕ್ತಿಯಾಗಿದ್ದು ವ್ಯವಸ್ಥಿತವಾಗಿ ಪಕ್ಷದ ನೀತಿ-ಕಾನೂನುಗಳನ್ನು ಬದಿಗೆ ತಳ್ಳಿ, ತನ್ನ ಅಧಿಕಾರ ಚಲಾಯಿಸುತ್ತಿದ್ದ ಮತ್ತು ಪಕ್ಷದ ಕಾನೂನುಗಳನ್ನು ತಾನು ಬದಲಿಸಬಹುದೆಂಬ ದಾರ್ಷ್ಟ್ಯ ಹೊಂದಿದ್ದಲ್ಲದೆ, ಕಿಮ್-ಜಾಂಗ್-ಉನ್‌ನ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದ ಮತ್ತು ಕಿಮ್‌ಗೆ ಗೌರವ ಸಲ್ಲಿಸುವಾಗ ಅರೆಮನಸ್ಸಿನಿಂದ ಚಪ್ಪಾಳೆ ತಟ್ಟುತ್ತಿದ್ದ ಹೀಗೆ ಕಿಮ್‌ಗಿಂತ ಎತ್ತರಕ್ಕೆರಲು ಪ್ರಯತ್ನಿಸುತ್ತಿದ್ದ ಎಂದು ವಿಶ್ಲೇಷಿಸುತ್ತಾರೆ.
ಡಿಸೆಂಬರ್ 13, 2013 ರಂದು ಸರ್ಕಾರಿ ಮಾಧ್ಯಮ ಪ್ರಕಟಿಸಿದ ಮಾಹಿತಿಯಂತೆ ಜಾಂಗ್‌ನನ್ನು ವಿಶೇಷ ಮಿಲಿಟರಿ ಪೀಠದ ಮುಂದೆ ವಿಚಾರಣೆಗೊಳಪಡಿಸಿ ಮರಣದಂಡನೆಗೊಳಪಡಿಸಲಾಗಿದೆ. ಆದರೆ ಹಲವು ಬೇರೆ ಮೂಲಗಳ ಪ್ರಕಾರ ಜಾಂಗ್‌ನನ್ನು 120 ಹಸಿದ ಜರ್ಮನ್ ಶೆಫರ್ಡ್ ನಾಯಿಗಳಿರುವ ಬೋನಿನೊಳಗೆ ನಗ್ನವಾಗಿ ತಳ್ಳಿ ಹಸಿದ ನಾಯಿಗಳಿಗೆ ಆಹಾರವನ್ನಾಗಿಸಿ ಸಾಯಿಸಲಾಗಿದೆ ಮತ್ತು ಸ್ವತಃ ಕಿಮ್ ಇದನ್ನು ಕಣ್ಣಾರೆ ಕಂಡು ವಿಕೃತ ಆನಂದಪಟ್ಟಿದ್ದಾನೆ. ಕಿಮ್-ಜಾಂಗ್-ಉನ್ ಎಂತಹಾ ಹುಚ್ಚ ಎಂದರೆ ಹಳೆಯ ಫೋಟೋಗಳಲ್ಲಿ ಮತ್ತು ವಿಡಿಯೋಗಳಲ್ಲಿದ್ದ ತನ್ನ ಮಾವ ಜಾಂಗ್-ಸಂಗ್-ತೇಕ್‌ನ ಚಿತ್ರವನ್ನು ಡಿಜಿಟಲ್ಲಿ ಅಳಿಸಿಹಾಕಿ ನಂತರ ಪ್ರಕಟಿಸಿದ್ದಾನೆ.
Discussion about this post