ಯೆಯೋನ್ಮಿಯನ್ನು ಖರೀದಿಸಿದ್ದ ವ್ಯಕ್ತಿ ಆಕೆಯೊಂದಿಗೆ ದೈಹಿಕ ಸಂಬಂಧಕ್ಕಾಗಿ ಪೀಡಿಸುತ್ತಿದ್ದ. ಆಕೆಯನ್ನು ಒಪ್ಪಿಸಲು ಅವಳು ತನ್ನನ್ನು ಮದುವೆಯಾದರೆ ಅವಳ ತಂದೆ ತಾಯಿಯನ್ನು ಖರೀದಿಸಿ ಕರೆತರುವ ಮಾತು ನೀಡಿ ಆಕೆಯನ್ನು ಮದುವೆಯಾದ. ತನ್ನ ಮಾತಿನಂತೆ ತಾಯಿಯನ್ನು ಖರೀದಿಸಿ ತಂದ. ಈ ವೇಳೆಗಾಗಲೇ ಕ್ಯಾನ್ಸರ್ನಿಂದ ಬಳಲುತ್ತಿದ್ದ ಆಕೆಯ ತಂದೆ ಜೈಲಿನ ಅಧಿಕಾರಿಗಳಿಗೆ ಲಂಚ ನೀಡಿ ಜೈಲಿನಿಂದ ಹೊರಬಂದಿದ್ದ ಮತ್ತು ಏಜೆಂಟರ ಮೂಲಕ ಯೆಯೋನ್ಮಿಯ ಪತಿ (ಮಾಲೀಕ) ಆಕೆಯ ತಂದೆಯನ್ನು ಉತ್ತರ ಕೊರಿಯಾದಿಂದ ಚೀನಾಕ್ಕೆ ಕರೆತಂದಿದ್ದ.
ಆದರೆ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ. ಆಕೆಯ ತಂದೆ ಚೀನಾ ತಲುಪಿದ ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದ. ಆ 13ರ ಪುಟ್ಟಬಾಲೆ ತನ್ನ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಮುಂದೆನು ಎಂದು ಯೋಚಿಸುತ್ತಿರು ವಾಗಲೇ ಪರಿಚಯವಾದ ಒಬ್ಬ ವ್ಯಕ್ತಿಯಿಂದ ತಿಳಿದಿದ್ದೇನೆಂದರೆ ದಕ್ಷಿಣ ಕೊರಿಯಾದಕ್ಕೆ ಹೋದರೆ ಸಂಪೂರ್ಣ ಸ್ವಾತಂತ್ರ್ಯ ಸಿಗುತ್ತದೆನ್ನುವುದು.
ತಡ ಮಾಡದೆ ಚೀನಾನ ತೊರೆಯವ ನಿರ್ಧಾರ ಮಾಡಿದ ತಾಯಿ ಮಗಳು ಕಾಲ್ನಡಿಗೆಯಲ್ಲೇ ಚೀನಾ ಗಡಿ ದಾಟಿ ಗೋಬಿ ಮರುಭೂಮಿ ತಲುಪಿದರು. ಕೇವಲ ಒಂದು ದಿಕ್ಸೂಚಿಯ ಸಹಾಯದೊಂದಿಗೆ ಮುಂದೆ ಸಾಗುತ್ತಿದ್ದರು. ಗೋಬಿ ಮರುಭೂಮಿ ಒಂದು ಶೀತ ಮರುಭೂಮಿ. ಅಲ್ಲಿನ ಉಷ್ಣಾಂಶ ಮೈನಸ್ ಡಿಗ್ರಿಯಲ್ಲಿರುತ್ತದೆ. ರಾತ್ರಿಯಲ್ಲಿ ಉಷ್ಣಾಂಶ ಬಹಳ ಕಡಿಮೆಯಿ ರುತ್ತದೆ. ಹಗಲಿನಲ್ಲಿ ಗೋಬಿ ಮರುಭೂಮಿ ದಾಟಲು ಪ್ರಯತ್ನಿಸಿದರೆ ಪೊಲೀಸರ ಕಣ್ಣಿಗೆ ಬೀಳುವ ಭಯದಿಂದ ಉಷ್ಣಾಂಶ ಕಡಿಮೆಯಿದ್ದರೂ ರಾತ್ರಿಯಲ್ಲೇ ಮರುಭೂಮಿ ದಾಟುವ ನಿರ್ಧಾರ ಮಾಡಿದ್ದರು. ಯಾಕೆಂದರೆ -40್ನ ಉಷ್ಣಾಂಶದಲ್ಲಿ ಯಾರಾದರೂ ಮರು ಭೂಮಿ ದಾಟುವ ಪ್ರಯತ್ನ ಮಾಡಬಹುದು ಅಂತ ಪೊಲೀಸರು ಸಹ ಊಹಿಸಲಿಕ್ಕೆ ಸಾಧ್ಯವಿಲ್ಲ.
ಎರಡು ದಿನಗಳ ನಂತರ ಮಂಗೋಲಿಯಾದಲ್ಲಿನ ದಕ್ಷಿಣ ಕೊರಿಯಾ ರಾಯಭಾರ ಕಚೇರಿ ತಲುಪಿದ. ತಾಯಿ ಮಗಳು ಅಲ್ಲಿನ ಅಧಿಕಾರಿಗಳ ಸಹಾಯದೊಂದಿಗೆ ದಕ್ಷಿಣ ಕೊರಿಯಾ ತಲುಪಿದರು. ಪ್ರಪ್ರಥಮ ಬಾರಿಗೆ ದಕ್ಷಿಣ ಕೊರಿಯಾಕ್ಕೆ ಕಾಲಿಟ್ಟ ಯೆಯೋನ್ಮಿಯನ್ನು ದಕ್ಷಿಣ ಕೊರಿಯಾದ ತಂತ್ರಜ್ಞಾನ ಜನರ ಜೀವನ ಗುಣಮಟ್ಟ ಆಶ್ಚರ್ಯ ಚಕಿತಗೊಳಿಸಿತ್ತು. ಯಾಕೆಂದರೆ 2 ವರ್ಷ ಚೀನಾದಲ್ಲಿ ಕಳೆದರೂ ಸಹ ಅವರು ನಗರವನ್ನು ಹೆಚ್ಚಾಗಿ ಕಂಡಿರಲಿಲ್ಲ ಮತ್ತು ಜಗತ್ತು ತಾಂತ್ರಿಕವಾಗಿ ಎಷ್ಟು ಮುಂದುವರೆದಿದೆ ಎಂದು ತಿಳಿದಿರಲಿಲ್ಲ. ಅಲ್ಲಿನ ಮಹಿಳೆಯರು ಜೀನ್ಸ್ ಪ್ಯಾಂಟ್ ಧರಿಸಿದ್ದರು. ಕಿವಿ ಓಲೆ ಹಾಕಿದ್ದರು, ಹಾಲಿವುಡ್ ಸಿನಿಮಾ ನೋಡುತ್ತಿದ್ದರು ಇದ್ಯಾವ ಕಾರಣಕ್ಕೂ ಅವರನ್ನು ಯಾರೂ ಬಂಧಿಸುತ್ತಿರಲಿಲ್ಲ ಎಂಬ ಅಂಶವೇ ಸಾಕಷ್ಟು ಸಂತೋಷ ನೀಡಿತ್ತು. ಜೀವನದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯದ ಅನುಭವ ಪಡೆದಳು.
(ಮುಂದುವರೆಯುವುದು)
Discussion about this post