ಶಿವಮೊಗ್ಗ: ಮತದಾರರ ಪಟ್ಟಿಗೆ ಹೆಸರು ನೋಂದಾವಣೆ ಅಂಗವಿಕಲರು, ಮಹಿಳೆಯರು, ದುರ್ಬಲರು ಮತ್ತು ಯುವ ಮತದಾರರ ಅನುಕೂಲಕ್ಕಾಗಿ 2019 ಫೆಬ್ರವರಿ 23 ಮತ್ತು 24 ರಂದು ಹಾಗೂ ಮಾರ್ಚ್ 2 ಮತ್ತು ಮಾರ್ಚ್ 3 ರಂದು ಮಿಂಚಿನ ಮತದಾನದ ಹೆಸರು ನೋಂದಾವಣೆ ಅಭಿಯಾನವು ನಡೆಯಲಿದೆ.
ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ( ಹತ್ತಿರದ ಅಂಗನವಾಡಿ ಕೇಂದ್ರ / ಸರಕಾರಿ ಶಾಲೆಗಳಲ್ಲಿ) ನಡೆಯಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾ ಶಾಖೆ ಕೋರಿದೆ.
ಅರ್ಹತೆಗಳು:
• 18 ವರ್ಷ ವಯಸ್ಸಾಗಿರಬೇಕು.
• ಭಾರತೀಯ ಪ್ರಜೆಯಾಗಿರಬೇಕು.
ದಾಖಲೆಗಳು:
• 2 ಫೋಟೋ
• ವಯಸ್ಸಿನ ದಾಖಲೆಗಳು (ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಅಧಾರ್ ಕಾರ್ಡ್, ಪಾಸ್ ಪೋರ್ಟ್, ಎಸ್.ಎಸ್.ಎಲ್.ಸಿ/ಪಿ.ಯು.ಸಿ ಅಂಕಪಟ್ಟಿ, ಪಾನ್ ಕಾರ್ಡ್)
• ವಾಸ್ಥವ್ಯ ದಾಖಲೆಗಳು (ಪಡಿತರ ಚೀಟಿ, ಅಧಾರ್ ಕಾರ್ಡ್, ಗ್ಯಾಸ್ ಸಿಲಿಂಡರ್ ಸ್ವೀಕೃತಿ ರಶೀದಿ, ವಿದ್ಯುತ್ ಬಿಲ್ ಪಾವತಿ ರಶೀದಿ, ಬ್ಯಾಂಕ್ ಪಾಸ್’ಬುಕ್ ಪ್ರತಿ, ಬಾಡಿಗೆ ಕರಾರು ಪತ್ರ)
Discussion about this post