ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಅರಸೀಕೆರೆ |
ಬಿಡದಿ ಯಾರ್ಡ್’ನಲ್ಲಿ ಸುರಕ್ಷತೆ ಮತ್ತು ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳಲಿರುವುದರಿಂದ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ಭಾಗಶಃ ರದ್ದುಗೊಳಿಸಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ವಿವರಗಳು ಇಂತಿವೆ.
ರದ್ದು: ಜುಲೈ 10, 2025 ರಂದು ರೈಲು ಸಂಖ್ಯೆ 56265 ಅರಸೀಕೆರೆ-ಮೈಸೂರು ಪ್ಯಾಸೆಂಜರ್, ರೈಲು ಸಂಖ್ಯೆ 06269 ಮೈಸೂರು – ಎಸ್’ಎಂವಿಟಿ ಬೆಂಗಳೂರು ಪ್ಯಾಸೆಂಜರ್ ಸ್ಪೆಷಲ್, ಮತ್ತು ರೈಲು ಸಂಖ್ಯೆ 06270 ಎಸ್’ಎಂವಿಟಿ ಬೆಂಗಳೂರು – ಮೈಸೂರು ಪ್ಯಾಸೆಂಜರ್ ಸ್ಪೆಷಲ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಹಾಗೂ ರೈಲು ಸಂಖ್ಯೆ 56266 ಮೈಸೂರು – ಅರಸೀಕೆರೆ ಪ್ಯಾಸೆಂಜರ್ ರೈಲನ್ನು ಸಹ ಜುಲೈ 11ರಂದು ರದ್ದುಗೊಳಿಸಲಾಗಿದೆ.ಭಾಗಶಃ ರದ್ದು
ಜುಲೈ 10, 2025 ರಂದು ಪ್ರಯಾಣ ಆರಂಭಿಸಲಿರುವ ರೈಲು ಸಂಖ್ಯೆ 66580 ಅಶೋಕಪುರಂ-ಕೆಎಸ್’ಆರ್ ಬೆಂಗಳೂರು ಮೆಮು ರೈಲು ರಾಮನಗರಂ-ಕೆಎಸ್’ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ರಾಮನಗರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ಜುಲೈ 11ರಂದು ಪ್ರಯಾಣ ಆರಂಭಿಸಲಿರುವ ರೈಲು ಸಂಖ್ಯೆ 66579 ಕೆಎಸ್’ಆರ್ ಬೆಂಗಳೂರು- ಅಶೋಕಪುರಂ ಮೆಮು ರೈಲು ಕೆಎಸ್’ಆರ್ ಬೆಂಗಳೂರು-ರಾಮನಗರಂ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಕೆಎಸ್’ಆರ್ ಬೆಂಗಳೂರಿನ ಬದಲು ರಾಮನಗರಂನಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post