ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋವಿಡ್19 ಹಿನ್ನೆಲೆಯಲ್ಲಿ ಸ್ಥಗಿತಗೊಂಡು 10 ದಿನಗಳ ಅವಧಿಗೆ ಮರು ಆರಂಭಗೊಂಡಿದ್ದ ಎರಡು ರೈಲುಗಳ ಸಂಚಾರವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ಮೈಸೂರು ವಿಭಾಗೀಯ ಅಧಿಕಾರಿಗಳು ಮಾಹಿತಿ ಪ್ರಕಟಿಸಿದ್ದು, ಬೆಂಗಳೂರು-ತಾಳಗುಪ್ಪ ಹಾಗೂ ತಾಳಗುಪ್ಪ-ಮೈಸೂರು ಎಕ್ಸ್’ಪ್ರೆಸ್ ರೈಲುಗಳ ಸಂಚಾರವನ್ನು ಮುಂದಿನ ಕೆಲವು ದಿನಗಳವರೆಗೂ ವಿಸ್ತರಣೆ ಮಾಡಲಾಗಿದ್ದು, ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.
ಯಾವ ರೈಲು, ಎಷ್ಟು ದಿನ ಸಂಚಾರ ವಿಸ್ತರಣೆ?
- 06227 ಸಂಖ್ಯೆಯ ಮೈಸೂರು-ತಾಳಗುಪ್ಪ ಎಕ್ಸ್’ಪ್ರೆಸ್(ರಾತ್ರಿ) ರೈಲು: 2021ರ ಜನವರಿ 30ರವರೆಗೂ ವಿಸ್ತರಣೆ
- 06228 ಸಂಖ್ಯೆಯ ತಾಳಗುಪ್ಪ-ಮೈಸೂರು ಎಕ್ಸ್’ಪ್ರೆಸ್(ರಾತ್ರಿ) ರೈಲು: 2021ರ ಜನವರಿ 31ರವರೆಗೂ ವಿಸ್ತರಣೆ
- 06529 ಸಂಖ್ಯೆಯ ಬೆಂಗಳೂರು-ತಾಳಗುಪ್ಪ ಇಂಟರ್’ಸಿಟಿ ಸೂಪರ್ ಫಾಸ್ಟ್ ರೈಲು: 2021ರ ಜನವರಿ 30ರವರೆಗೂ ವಿಸ್ತರಣೆ
- 06530 ಸಂಖ್ಯೆಯ ತಾಳಗುಪ್ಪ-ಬೆಂಗಳೂರು ಇಂಟರ್’ಸಿಟಿ ಸೂಪರ್ ಫಾಸ್ಟ್ ರೈಲು: 2021ರ ಜನವರಿ 31ರವರೆಗೂ ವಿಸ್ತರಣೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post