ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೊರೋನಾ ಲಾಕ್ ಡೌನ್’ನಿಂದ ಕಂಗೆಟ್ಟಿರುವ ದೇಶದ ಜನರಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದ್ದು, ಮೂರು ತಿಂಗಳು ವಿದ್ಯುತ್ ಬಿಲ್ ಪಾವತಿಯಿಂದ ವಿನಾಯ್ತಿ ನೀಡಿದೆ.
ಈ ಕುರಿತಂತೆ ಘೋಷಣೆ ಮಾಡಿರುವ ಕೇಂದ್ರ ಸರ್ಕಾರ, ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ನಿರ್ದೇಶನ ನೀಡಿದ್ದು, ಮುಂದಿನ ಮೂರು ತಿಂಗಳು ಯಾವುದೇ ಗ್ರಾಹಕರಿಂದ ವಿದ್ಯುತ್ ಬಿಲ್ ಪಡೆಯಬಾರದು. ಈ ಕುರಿತಂತೆ ರಾಜ್ಯ ಸರ್ಕಾರಗಳ ತಮ್ಮ ತಮ್ಮ ಕಂಪೆನಿಗಳಿಗೆ ಸೂಚನೆ ನೀಡಿ, ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದೆ.
ಇದೇ ವೇಳೆ ಲಾಕ್ ಡೌನ್ ಸಮಯದಲ್ಲಿ ದೇಶದಲ್ಲಿ ಎಲ್ಲಿಯೂ ಸಹ ವಿದ್ಯುತ್ ಕೊರತೆ ಅಥವಾ ಲೋಡ್ ಶೆಡ್ಡಿಂಗ್ ಆಗದಂತೆ ನೋಡಿಕೊಳ್ಳಿ ಎಂಬ ಸ್ಪಷ್ಟ ನಿರ್ದೇಶನವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.
ಪಾವತಿ ಭದ್ರತಾ ವ್ಯವಸ್ಥೆಯನ್ನು ವಿತರಣಾ ಕಂಪನಿಗಳು 2020 ರ ಜೂನ್ 30 ರವರೆಗೆ ನಿರ್ವಹಿಸಲಿವೆ ಎಂದು ಸರ್ಕಾರ ತಿಳಿಸಿದೆ. 30 ಜೂನ್ 2020 ರವರೆಗೆ ವಿದ್ಯುತ್ ರವಾನೆಗಾಗಿ ಉತ್ಪಾದನಾ ಕಂಪನಿಗಳೊಂದಿಗೆ ವಿತರಣಾ ಕಂಪೆನಿಗಳು ನಿರ್ವಹಿಸಬೇಕಾದ ಪಾವತಿ ಭದ್ರತಾ ಕಾರ್ಯವಿಧಾನವನ್ನು ಐವತ್ತು ಪ್ರತಿಶತದಷ್ಟು ಕಡಿಮೆಗೊಳಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.
Get in Touch With Us info@kalpa.news Whatsapp: 9481252093
Discussion about this post