ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋವಿಡ್19 ಲಾಕ್’ಡೌನ್’ನಿಂದ ಸ್ಥಗಿತಗೊಂಡಿದ್ದ ಎಕ್ಸ್’ಪ್ರೆಸ್ ರೈಲು ಸಂಚಾರ ಮತ್ತೆ ಅರಂಭಗೊಳ್ಳಲಿದ್ದು, ಇದು ಅಧಿಕೃತ ಘೋಷಣೆಯಾಗಿದೆ. ಆದರೆ, ಪ್ರಾಯೋಗಿಕವಾಗಿ 10 ದಿನಗಳ ಕಾಲ ಈ ರೈಲುಗಳ ಸಂಚಾರ ನಡೆಯಲಿದ್ದು, ಪ್ರತಿಕ್ರಿಯೆ ನೋಡಿಕೊಂಡು ಮುಂದುವೆರಸಲಾಗುತ್ತಿದೆ.
ಈ ಕುರಿತಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ನಿನ್ನೆ ಮಹತ್ವದ ಸಭೆ ನಡೆಸಿದ್ದು, ಈ ವಿಚಾರವಲ್ಲಿ ಘೋಷಣೆ ಮಾಡಿದ್ದಾರೆ.
ಈ ಹಿಂದೆ ಪ್ರತಿ ದಿನ ರಾತ್ರಿ ಸಂಚರಿಸುತ್ತಿದ್ದ ತಾಳಗುಪ್ಪ-ಬೆಂಗಳೂರು-ಮೈಸೂರು ಎಕ್ಸ್’ಪ್ರೆಸ್ ಹಾಗೂ ಬೆಂಗಳೂರು-ಶಿವಮೊಗ್ಗ ಇಂಟರ್’ಸಿಟಿ ಎಕ್ಸ್’ಪ್ರೆಸ್ ರೈಲುಗಳ ಸಂಚಾರ ಡಿ.7 ಹಾಗೂ 8ರಿಂದ ಮರು ಆರಂಭಗೊಳ್ಳಲಿದೆ.
ಯಾವ ರೈಲು ಸಂಚಾರ ಎಂದಿನಿಂದ-ಎಂದಿನವರೆಗೂ ಸಂಚಾರ? 06227 ಸಂಖ್ಯೆಯ ಮೈಸೂರು-ತಾಳಗುಪ್ಪ ಎಕ್ಸ್'ಪ್ರೆಸ್ ರೈಲು-ಡಿ.9ರಿಂದ 18ರವರೆಗೆ ನಿಲುಗಡೆ ಹಿಂಪಡೆದ ನಿಲ್ದಾಣಗಳು: ಶ್ರೀರಂಗಪಟ್ಟಣ, ಬ್ಯಾಡರಹಳ್ಳಿ, ಹನಕೆರೆ, ಶೆಟ್ಟಿಹಳ್ಳಿ, ಹೆಜ್ಜಾಲ 06228 ಸಂಖ್ಯೆಯ ತಾಳಗುಪ್ಪ-ಮೈಸೂರು ಎಕ್ಸ್'ಪ್ರೆಸ್ ರೈಲು-ಡಿ.10ರಿಂದ 19ರವೆರಗೆ ನಿಲುಗಡೆ ಹಿಂಪಡೆದ ನಿಲ್ದಾಣಗಳು: ಮಲ್ಲೇಶ್ವರಂ, ಹನಕೆರೆ, ಬೈದರಹಳ್ಳಿ ಮತ್ತು ಶ್ರೀರಂಗಪಟ್ಟಣ 06529 ಸಂಖ್ಯೆಯ ಬೆಂಗಳೂರು-ತಾಳಗುಪ್ಪ ಇಂಟರ್ ಸಿಟಿ ಸೂಪರ್ ಫಾಸ್ಟ್ ರೈಲು: ಡಿ.7ರಿಂದ 16ರವರೆಗೆ 06529 ಸಂಖ್ಯೆ ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ಸೂಪರ್ ಫಾಸ್ಟ್ ರೈಲು: ಡಿ.8ರಿಂದ 17ರವರೆಗೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post