ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಕುಂಸಿ 110/11 ಕೆ.ವಿ. ಕುಂಸಿ ವಿದ್ಯುತ್ ವಿವಿ ಕೇಂದ್ರದಲ್ಲಿ ನಾಲ್ಕನೇಯ ತ್ರೆûಮಾಸಿಕ ನಿರ್ವಹಣೆ ಕಾರ್ಯ ಹಾಗೂ 20 ಎಂ.ಬಿ.ಎ. ಶಕ್ತಿ ಪರಿವರ್ತಕಕ್ಕೆ ಹೊಸದಾಗಿ ಸಿಆರ್ ಪ್ಯಾನಲ್ ಕಮಿಷನ್ ಹಾಗೂ 11 ಕೆ.ವಿ. ವಿತರಕಗಳ ಚಾಲನೆಗೊಳಿಸುವ ಕಾರ್ಯ ಇರುವುದರಿಂದ ಕುಂಸಿ ವಿ ವಿ ಕೇಂದ್ರದಿಂದ ಸರಬರಾಜಾಗುವ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕುಂಸಿ ಮೆಸ್ಕಾಂ ಪಾನಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಕುಂಸಿ, ಬಾಳೆಕೊಪ್ಪ, ಜೋರಡಿ, ತುಪ್ಪೂರು, ಕೋಣೆಹೂಸೂರು, ಹೊರಬೈಲು, ಹಾರ‌್ನಳ್ಳಿ, ರಾಮನಗರ, ಮುದುವಾಲ, ಯಡವಾಲ, ದೇವವಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ, ರಟ್ಟೆಹಳ್ಳಿ, ಆಯನೂರು, ಮಂಡಘಟ್ಟ, ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ತಮ್ಮಡಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಫೆಬ್ರವರಿ 12 ರಂದು ಬೆಳಗ್ಗೆ 09.00 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post