ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದಲ್ಲಿನ ಕೆ.ಆರ್. ವಾಟರ್ ವರ್ಕ್ಸ್‌ಗೆ ವಿದ್ಯುತ್ ಸರಬರಾಜಾಗುವ ವಿ.ವಿ. ಕೇಂದ್ರದ ದುರಸ್ಥಿ ಮತ್ತು ನಿರ್ವಹಣೆ ಇರುವುದರಿಂದ ಕೆ.ಆರ್. ಜಲ ಶುದ್ಧೀಕರಣ ಕೇಂದ್ರ ಘಟಕದಲ್ಲಿ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಫೆ.13 ಮತ್ತು 14 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದು. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಳ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post