ವಾತಾವರಣಕ್ಕನುಗುಣವಾಗಿ ಅವನ ನಡೆ ಇರಬಹುದಷ್ಟೆ. ನಾಳೆ ಭಯೋತ್ಪಾದಕರು ಸುಮ್ಮನಿದ್ದರೆ ಅದಕ್ಕೋ OK. Pak Army ಮೌನವಾದರೆ ಅದಕ್ಕೂ OK.ಅಂತೂ ಪ್ರಧಾನಿ ಪಟ್ಟ ಉಳಿಸಿಕೊಳ್ಳಬೇಕು. ಇದೇ ಅವನಲ್ಲಿರುವ ದೌರ್ಬಲ್ಯ. ಇದನ್ನೇ Encashment ಮಾಡಿಕೊಂಡರೆ ಏನೂ ಮಾಡಬಹುದಲ್ವ?
ಇಲ್ಲಿ ಎರಡು ವಾತಾವರಣ ಇದೆ. ಒಂದು Encashment ಮಾಡಿಕೊಳ್ಳುವವರದ್ದು. ಅದರ ಅಧಾರದಲ್ಲಿ ಭಾರತ ಮತ್ತು ವಿಶ್ವದ ನಿರ್ಧಾರ ಇರುತ್ತದೆ.
ಎರಡನೆಯದ್ದು ಗ್ರಹ ಗೋಚರ ಸ್ಥಿತಿ ಆಧಾರಿತವಾದದ್ದು(ಇದನ್ನು ಎಷ್ಟು ಜನ ನಂಬುತ್ತಾರೋ ಗೊತ್ತಿಲ್ಲ ಬಿಡಿ)
ಮೊದಲಿಗೆ ಸಂಕ್ಷಿಪ್ತವಾಗಿ ಜ್ಯೋತಿಷ್ಯ ವಿಚಾರ ಹೇಳ್ತೇನೆ. ಇಮ್ರಾನನಿಗೆ ಈಗ ಶುಕ್ರ ದಶೆ. + point. ಗೋಚರದಲ್ಲಿ ಶನಿ ಲಾಭದಲ್ಲಿ ಮತ್ತು ಗುರು ಲಾಭಸ್ಥಾನಕ್ಕೆ ಪ್ರವೇಶ ಕಾಲ( ಕುಂಭ ರಾಶಿ). ಇದೂ + point. ಇಮ್ರಾನನ ಜಾತಕದಲ್ಲಿ ಅತ್ಯಂತ ಬಲಿಷ್ಟ ಶನಿ ಇರುವುದು. ಇದೂ ಮುತ್ಸದಿತನಕ್ಕೆ(ಇವನಿಗಾಗುವಾಗ ಬದುಕುವ ದಾರಿಗೆ. ಮೋದಿಯವರ ಆದರ್ಶವನ್ನು ಎತ್ತಿ ಹಿಡಿದು ಪ್ರಧಾನಿಯೂ ಆದ) ಇದೂ ಇವನಿಗೆ + point.
ಇನ್ನು – pointಗಳೇನು?
ವೃಶ್ಚಿಕ ಲಗ್ನ ಸಂಜಾತನಿವನು. ಲಾಭಸ್ಥಾನದಲ್ಲಿ ಬಲಿಷ್ಟ ಶನಿ. ಲಗ್ನದಲ್ಲೇ ನಿಪುಣ ಯೋಗ. ಹೀಗಿದ್ದರೂ ಶನಿಯ ಮೂರನೆಯ ದೃಷ್ಟಿಯು ಸ್ವಾರ್ಥ ದೃಷ್ಟಿಯಾಗುತ್ತದೆ. ರಾವಣನಿಗೂ ಇದೇ ಸ್ಥಿತಿ ಇತ್ತು.ಕೊನೆಗೆ ಏನಾದ? ಎಂಬುದನ್ನು ತಿಳಿದುಕೊಳ್ಳಿ. ಹಾಗೆಯೇ ಇವನಿಗೂ ದುರಂತವೆ ಕಾದಿದೆ. ರಾವಣ ಇಡೀ ಲಂಕೆಯನ್ನೇ ಬಲಿ ಕೊಟ್ಟಂತೆ, ಈ ಇಮ್ರಾನ ಇಡೀ ಪಾಕಿಸ್ಥಾನವನ್ನೇ ಬಲಿಕೊಡುತ್ತಾನೆ. ಇದಲ್ಲದೆ ಶುಕ್ರದಶೆ ಒಂದೆಡೆ ಅಧಿಕಾರಕ್ಕೆ ಉತ್ತಮವೇ ಆದರೂ,ಇನ್ನೊಂದೆಡೆ ನಾಶಕ್ಕೂ ಅವನೇ ಕಾರಣ.ಶುಕ್ರ ಇವನಿಗೆ ವ್ಯಯಾಧಿಪನೂ, ಮರಣ ದ್ರೇಕ್ಕಾಣಾಧಿಪನೂ ಆದುದರಿಂದ ಇದು ಇವನಿಗೆ big minus Point.
ಎರಡನೆಯದ್ದಾಗಿ ಇವನ ಲಗ್ನಾಧಿಪ ಕುಜನೇ ಶತ್ರು ರಾಶ್ಯಾಧಿಪ. ಅಂದರೆ ಸ್ವಯಂಕೃತ ಅಪರಾದ. ಇದೂ ಒಂದು – Point. ಜ್ಞಾನ,ವಾಕ್ ಸ್ಥಾನಾಧಿಪ ಗುರುವು ಷಷ್ಟದಲ್ಲಿ ಅಜ್ಞಾನ, ಅಸಂಭದ್ಧ ತೀರ್ಮಾನಕ್ಕೆ ಪುಷ್ಟಿ ಕೊಡುತ್ತಾನೆ. ಅಲ್ಲಿಗೆ ಇದು ಕೂಡಾ – Point ಆಗುತ್ತದೆ. ರಾಹು ಕೇತುಗಳು ಸೌಭಾಗ್ಯಗಳನ್ನು ನೀಡಿದರೂ ಇದು ಅವಸರದ ನಿರ್ಧಾರದಲ್ಲಿ ಅಪಾಯ. ಇದೂ – Point. ಲಗ್ನಾಧಿಪ ಕುಜನು ನೀಗಡ(ಬಂಧನ) ದ್ರೇಕ್ಕಾಣದಲ್ಲಿ ಉತ್ಸಾಹದಲ್ಲಿ ಉಚ್ಚನಾಗಿರುತ್ತಾನೆ. ಈ ತೃತೀಯವು ಕುಜನಿಗೆ ಉತ್ಸಾಹ, ಹುಮ್ಮನಸ್ಸು ಉತ್ತಮ ಆದರೂ ಬಂಧನದ ದ್ರೇಕ್ಕಾಣದಲ್ಲಿ ಲಗ್ನಾಧಿಪತಿಯಾಗಿರುವುದು – Point. ಅದು ಹೇಗೆಂದರೆ ಇವನು ಒತ್ತಡಗಳ ಬಂಧನದಲ್ಲಿದ್ದು, ಮುಂದೆ ಸೆರೆಮನೆಯ ಬಂಧನಕ್ಕೆ ಹೋಗುವುದನ್ನು ಸೂಚಿಸುತ್ತದೆ. ಯಾರೋ ಮಾಡಿದ ಸ್ವಾರ್ಥ ಉದ್ದೇಶದ ಕೆಲಸಕ್ಕೆ, ತನ್ನ ಪೀಠದ ಸ್ವಾರ್ಥದಿಂದ ಬೆಂಬಲ ಕೊಟ್ಟು ಬಂಧಿತನಾಗಬಹುದು ಎಂದು ಸೂಚಿಸುತ್ತದೆ. ಇದು ಜ್ಯೋತಿಷ್ಯಾಧರಿತ ಮುಂದಿನ ಫಲ.
ಭಾರತದ ಕಿಚ್ಚಿನಿಂದ ಹತಾಷಗೊಂಡಿರುವ ಪಾಕಿಸ್ಥಾನ ವಾಮ ಮಾರ್ಗವನ್ನು ಅನುಸರಿಸಲು ಮುಂದಾಗುವ ಸಾಧ್ಯತೆಯಿದೆ. ಇದರ ಭಾಗವಾಗಿ ಭಾರತಕ್ಕೆ ಸಂಬಂಧಿಸಿದ ವಿಮಾನಗಳನ್ನು ಹೈಜಾಕ್ ಮಾಡುವುದು, ನಮ್ಮ ಯೋಧರನ್ನು ಒತ್ತೆಯಾಳಾಗಿ ಇರಿಸಿಕೊಳ್ಳುವುದು ಸೇರಿದಂತೆ ನೀಚ ಕೃತ್ಯಗಳಿಗೆ ಕೈಹಾಕಬಹುದು. ಅಲ್ಲದೇ, ನಾಗರಿಕ ವಿಮಾನಗಳನ್ನು ಹೈಜಾಕ್ ಮಾಡಿ, ನಾಶ ಮಾಡುವುದು, ಆ ಮೂಲಕ ಭಾರತದ ನಾಗರಿಕರ ಪ್ರಾಣಹಾನಿ ಮಾಡುವ ಕೃತ್ಯಕ್ಕೆ ಕೈ ಹಾಕುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಬೇಕು.
ರಾಜಕೀಯ ವಿದ್ಯಾಮಾನ ನೋಡೋಣ:
ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಯೋತ್ಪಾದನೆಯ ವಿಚಾರದಲ್ಲಿ ಮೊದಲಾಗಿ ಪಾಕಿಸ್ಥಾನವನ್ನು ನಿಷೇಧಿಸಿದವ. ಅವನಿಗೆ ಮತಾಂಧರ ನಿರ್ಮೂಲನವೂ,ಪಾಕ್ ಅಣ್ವಸ್ತ್ರ ನಾಶವೂ ಬೇಕು. ಆದರೆ ನೈತಿಕವಾಗಿ ಧಾಳಿ ಮಾಡುವ ಹಾಗಿಲ್ಲ. ಇಡೀ ಜಗತ್ತಿನಲ್ಲಿ ಮತಾಂಧ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಎಂದರೆ ಪಾಕಿನ ಉತ್ತರ ಭಾಗ, ಅಫಘಾನಿಸ್ಥಾನದ ಪಾಕ್ ಸಮೀಪದ ಭಾಗ. ಅಫಘಾನಿಸ್ಥಾನದಲ್ಲಿ ಈಗಾಗಲೇ ಟ್ರಂಪ್ ಸ್ವಲ್ಪ ಮಟ್ಟಿಗೆ ಐಸಿಸ್ ಉಗ್ರರ ಧಮನ ಮಾಡಿಯಾಗಿದೆ.ಆ ದರೂ ಮತ್ತೆ ಬೆಳೆಯುತ್ತಿದೆ. ಮೋದಿಯವರು ನಿರ್ನಾಮ ಮಾಡಿದರೂ ಈ ರಕ್ತಬೀಜರು ಬೆಳೆಯುತ್ತಾ ಹೋದಾರು. ಇರಾನಿಗೆ( ಶಿಯಾ) ಪಾಕಿನ ಸುನ್ನಿಗಳು ಅಪಾಯಕಾರಿ. ಹಾಗಾಗಿ ಇರಾನ್ ಕೂಡಾ ವಿರೋಧವೆ. ರಷ್ಯ ಹೇಗೂ ಈ ಮತಾಂಧರ ವಿರೋಧಿಗಳೆ. ಹಾಗೆ ನೋಡಲು ಹೋದರೆ ಪ್ರಗತಿಪರ ರಾಷ್ಟ್ರಗಳೆಲ್ಲವೂ ಮತಾಂಧರ ಪೋಷಕ, ಸೃಷ್ಟಿಯ ಪಾಕಿಗೆ ವಿರೋಧವೆ. ಚೈನ ಕೂಡಾ ಮೇಲ್ನೋಟಕ್ಕೆ ವಿರೋಧ ಇದ್ದರೂ ಅವರ ಚೈನಾ ಬೆಲೂಚಿಸ್ಥಾನ ಕಾರಿಡಾರ್ ಯೋಜನೆಗೆ ಪಾಕ್ ಒಪ್ಪಿಗೆ ನೀಡಿದುದರಿಂದ ಪ್ರತ್ಯಕ್ಷ ಸಹಾಯ ಮಾಡಲಾಗದಿದ್ದರೂ, ಪರೋಕ್ಷ ಸಹಾಯ (weapons supply ಮಾಡಲು) ಮಾಡಿಯೇ ಮಾಡುತ್ತದೆ. ಯಾಕೆಂದರೆ ಪಾಕ್ ಭಾರತದ ಪರವಾದರೆ ಅವರ ವ್ಯಾಪಾರ ನಿಂತು ಬಿಡಬಹುದು. ಇನ್ನು ಇಸ್ರೇಲ್ ನಿಜವಾದ ಯೋಧರ ದೇಶ.ಅಸತ್ಯಕ್ಕೆ ಮಣೆ ಹಾಕದ ದೇಶ.
ಪಾಕಿಸ್ಥಾನ ವಿರೋಧಿ. ಹಿಂದಿನ UPA ಸರಕಾರ ಇದಕ್ಕಾಗಿಯೇ ಇಸ್ರೇಲಿಗೆ ಹೋಗದೇ ಇದ್ದದ್ದು. ಪಾಕಿನ ಪರ ಎಂದು ಹೇಳಬಹುದು.
ಮಂದೇನು? ಪಾಕಿಸ್ಥಾನವು ಪ್ರತೀಕಾರ ಬಲಿ(Revenge )ತೆಗೆದುಕೊಳ್ಳದೆ ಇರಲಾರದು. ಯಾವ ಸ್ವರೂಪದಲ್ಲಿ?
ಒಂದು ವೇಳೆ ಇಮ್ರಾನ್ ಖಾನ್ ಮನ ನೊಂದು, ಸತ್ಪ್ರಜೆಗಳ ಒತ್ತಡದಿಂದ, ಕುರ್ಚಿಯನ್ನು ಉಳಿಸಿಕೊಳ್ಳಲು ಅಥಾವಾ ಭಯದಿಂದ ಶಾಂತಿ ಮಾತುಕತೆಗೆ ಮುಂದಾದರೆ, ವಿಶ್ವವೂ ಸೇರಿದಂತೆ ಭಾರತವು ಅದಕ್ಕೆ ಒಪ್ಪಬಹುದು. ಆದರೆ ಒಂದು ಶರ್ತದ ಆಧಾರದಲ್ಲಿ ಭಯೋತ್ಪಾದಕರ ಧಮನಕ್ಕೆ ಸಹಕರಿಸಬೇಕು, ಭಯೋತ್ಪಾದಕರ ಬೇಟೆಗೆ ನಮ್ಮೊಂದಿಗೆ ಇದ್ದು ಅವಕಾಶ ಮಾಡಿಕೊಡಬೇಕು. ಇದನ್ನು ಅಮೇರಿಕಾದಿ ಪ್ರಗತಿಪರ ರಾಷ್ಟ್ರಗಳು ಬೆಂಬಲಿಸುತ್ತದೆ. ಹಾಗೇನಾದರೂ ಇಮ್ರಾನ್ ಒಪ್ಪಿದರೆ ಭಯೋತ್ಪಾದಕರು ಸುಮ್ಮನಿರಲಾರರು. ಇಮ್ರಾನನ – point ದೋಷಗಳಿಂದಾಗಿ ಇಮ್ರಾನ್ ಖಾನ್ ಸಾಯಬೇಕಾದೀತು. ಮತಾಂಧರಿಗೆ ಮಣಿದು ಈ ಶರ್ತಕ್ಕೆ ಒಪ್ಪದಿದ್ದಲ್ಲಿ ವಿಶ್ವವೇ ತಿರುಗಿಬಿದ್ದು ಇಮ್ರಾನನ – point ದೋಷಗಳು ವೃದ್ಧಿಯಾದೀತು. ಅಂದರೆ ಇಮ್ರಾನ್ ಖಾನನ ಬಂಧನ ಯೋಗಕ್ಕೆ ಪುಷ್ಟಿ ಸಿಗಬಹುದು.
ಈ ಮಧ್ಯೆ ಪಾಕ್ ಸೈನಿಕರು ಭಯೋತ್ಪಾದಕರ ಜತೆ ಸೇರಿ ಹತಾಶರಾಗಿ ಅಣು ಸಮರಕ್ಕೂ ಮುಂದಾಗಬಹುದು. ಯಾಕೆಂದರೆ ಪಾಕಿಸ್ಥಾನವು ಮಾನವತಾ ವಾದಿಗಳಲ್ಲ, ಸ್ವಾರ್ಥಿಗಳು. ಬೇರೊಂದು ದೇಶದ ಪ್ರಜೆಗಳ ಸುಖದುಃಖಗಳನ್ನು ನೋಡುವವರಲ್ಲ. ಇಂತಹ ಬೇಜವಬ್ದಾರಿಗಳು ಅಣು ಸಮರಕ್ಕಿಳಿಯಬಹುದು. ಎಲ್ಲಾದರೂ ಇಳಿದರೆ ಅಣು ಬಾಂಬ್ ಹೊತ್ತ ನೌಕೆಯು ಗಗನಕ್ಕೇರುವುದಕ್ಕೆ ಮುಂಚೆಯೇ ಪಾಕ್ ನೆಲವನ್ನು ಚುಂಬಿಸಿ ಪಾಕಿಸ್ಥಾನವನ್ನು ಮತ್ತೆಂದಿಗೂ ನೋಡದಂತೆ ಮಾಡಬಹುದು. ಅಲ್ಲಿಗೆ ಇಡೀ ಜಗತ್ತು ಸ್ಥಬ್ಧವಾಗಿ ಯುದ್ಧದ ಮಾತುಗಳು ಸಧ್ಯಕ್ಕೆ ಪೂರ್ಣ ವಿರಾಮ ಹೊಂದಬಹುದು.
Discussion about this post