ಸುಬ್ರಹ್ಮಣ್ಯ: ಜಮ್ಮುವಿನ ಪುಲ್ವಾಮಾದಲ್ಲಿ ಗುರುವಾರ ಉಗ್ರರ ದಾಳಿಯ ಪರಿಣಾಮ ವೀರಸ್ವರ್ಗ ಸೇರಿದ ಹೆಮ್ಮೆಯ ಭಾರತೀಯ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸುಬ್ರಹ್ಮಣ್ಯ ಘಟಕ, ಸುಳ್ಯ ಪ್ರಖಂಡ ಹಾಗೂ ಕಡಬ ಪಿಜಕ್ಕಳ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮೌನಾಚರಣೆ ಮಾಡಿ, ವೀರ ಯೋಧರ ತ್ಯಾಗ ಹಾಗೂ ಬಲಿದಾನವನ್ನು ಸ್ಮರಿಸಿಕೊಳ್ಳಲಾಯಿತು.

















