ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರಿಗೆ ನಗರದಲ್ಲಿ ಬಾಗಿಣ ನೀಡಿ, ಆರತಿ ಬೆಳಗಿ ಕೃತಜ್ಞತೆ ಸಲ್ಲಿಸಲಾಯಿತು.
ಶಿವಮೊಗ್ಗ ಜಿಲ್ಲೆ ಬಿಜೆಪಿ ಯುವ ಮೋರ್ಚಾಹಾಗೂ ಗಾಜನೂರು ಜಿಲ್ಲಾ ಪಂಚಾಯತ್ ಸದಸ್ಯರಾದ ಹೇಮಾವತಿ ಶಿವನಂಜಪ್ಪ ಇವರ ಸಹಯೋಗದಲ್ಲಿ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಶಿಕ್ಷಕಿಯರಿಗೆ ಹಣ್ಣು ಮತ್ತು ಬಾಗಿನ ನೀಡಿ ಆರತಿ ಬೆಳಗಿ ಕರೋನ ವಿರುದ್ಧದ ಹೋರಾಟದಲ್ಲಿ ಇವರ ಸೇವೆಯನ್ನು ನೆನೆದು ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಎಂ.ಬಿ. ಹರಿಕೃಷ್ಣ. ಜಿಲ್ಲಾ ಪಂಚಾಯತ್ ಸದಸ್ಯರಾದ ಹೇಮಾವತಿ ಶಿವ ನಂಜಪ್ಪ, ರಾಮೇನಕೊಪ್ಪ ಸತೀಶ್, ಬಿಜೆಪಿ ಪ್ರಮುಖರಾದ ಶಿವನಂಜಪ್ಪ, ಗಾಜನೂರು ಶಕ್ತಿಕೇಂದ್ರ ಅಧ್ಯಕ್ಷರಾದ ಸುರೇಶ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು ಗ್ರಾಮ ಪ್ರಮುಖರು ಮುಂತಾದವರಿದ್ದರು.
Get in Touch With Us info@kalpa.news Whatsapp: 9481252093
Discussion about this post