ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಗಣಪತಿ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಪ್ರಸಿದ್ಧ ದೇವಸ್ಥಾನದಲ್ಲಿ ಇಲ್ಲಿನ ಪ್ರಸನ್ನ ಗಣಪತಿ ಭಕ್ತಿ ಪಂಥದ ಪ್ರಮುಖ ದೇವಾಲಯದ ಗುಂಪಿನಲ್ಲಿ ಒಂದು.
ಈ ಮಹಾಮಹಿಮೆಯುಳ್ಳ ಶ್ರೀ ಪ್ರಸನ್ನ ಗಣಪತಿ ವಿಗ್ರಹವನ್ನು 1475 ರಲ್ಲಿ ಚಿತ್ರದುರ್ಗದ ಪಾಳೆಯಗಾರ ಕಾಮಗೇತಿ ವಂಶಸ್ಥರಾದ ಮದಕರಿ ನಾಯಕ ಮೈದುನರಾದ ಶ್ರೀ ಗುಲ್ಯಪ್ಪ ನಾಯಕರವರಿಂದ ಪ್ರತಿಷ್ಠಾಪನೆ ಮಾಡಲಾಗಿದೆ.
ಒಮ್ಮೆ ಶಿವಮೊಗ್ಗದಿಂದ ಹೊಳಲ್ಕೆರೆ ಮಾರ್ಗವಾಗಿ ನಮ್ಮ ಊರಿಗೆ ಹೋಗುವ ಮಾರ್ಗದಲ್ಲಿ ಪ್ರಸಿದ್ಧ ಪ್ರಸನ್ನ ಗಣಪತಿಯ ದೇವಾಲಯದ ದರ್ಶನ ಮಾಡುವ ಅವಕಾಶ ಒದಗಿಬಂತು. ನಾನು ಚಿಕ್ಕವಯಸ್ಸಿನಲ್ಲಿ ಅಂದರೆ ನಾನು 10-12 ವರ್ಷವಯಸ್ಸಿನಲ್ಲಿ ಈ ಊರಿನ ಗಣಪತಿಯನ್ನು ನೋಡಿದ್ದೇನೆ ಆಗ ಆ ಗಣಪತಿಯು ಸುಮಾರು 3 ರಿಂದ 4 ಅಡಿ ಎತ್ತರದಲ್ಲಿ ನಿಂತಿದ್ದ ಗಣಪತಿ ಕಳೆದ 3 ವರ್ಷದ ಹಿಂದೆ ಅದು ಸುಮಾರು 6 ರಿಂದ 7 ಅಡಿ ಬೆಳೆದಿರುತ್ತದೆ ಅದರಂತೆ ಇಂದು ನಾನು ನೋಡಿದಾಗ ಅದು ಸುಮಾರು 10 ಅಡಿ ಎತ್ತರಕ್ಕೆ ಬೆಳೆದು ನಿಂತ ಆ ದೃಶ್ಯ ಇಂದಿನ ಕಲಿಯುಗದಲ್ಲಿ ಈ ರೀತಿ ಇದಿಯಾ ಎಂಬ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಈಗ ಗಣಪತಿ ಬೆಳೆಯದ ಹಾಗೆ ಬಯಲು ಪ್ರದೇಶದಲ್ಲಿ ಇದ್ದ ಗಣಪತಿಗೆ ದಿಗ್ಬಂದನ ಮಾಡಿ ಈಗ ದೇವಸ್ಥಾನವಾಗಿ ಮಾರ್ಪಾಟು ಮಾಡಲಾಗಿದೆ ಈಗ ಗಣಪತಿಯು ಬೆಳೆಯುವುದನ್ನು ನಿಲ್ಲಿಸಿದೆ.
ಗಣಪತಿಯ ಎಡ ಕೈ ಭಾಗದಲ್ಲಿ ನರಸಿಂಹ ದೇವರ ಆಕೃತಿ ಇದೆ, ಎಡಭಾಗದಲ್ಲಿ ವ್ಯಾಸರ ಆಂಜನೇಯ ದೇವರು ಬಲಭಾಗದಲ್ಲಿ ತಿರುಪತಿ ವೆಂಕಟರಮಣ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಪ್ರಮುಖವಾಗಿ ಗಣಪತಿಯ ಹಿಂದೆ ಜಡೆಯು ಇರುತ್ತದೆ.
ಪ್ರಸನ್ನ ಗಣಪತಿ ಇಂದಿಗೂ ಭಕ್ತರಿಗೆ ಆಶೀರ್ವಾದ ನೀಡುತ್ತ ದೊಡ್ಡ ಗಣಪತಿಯಾಗಿ ಬೆಳೆದು ನಿಂತಿರುವುದು. ತಾವು ಸಹ ಒಮ್ಮೆ ಪ್ರಸನ್ನ ಗಣಪತಿಯ ದರ್ಶನ ಮಾಡಿಬನ್ನಿ.
-ಮುರಳೀಧರ ನಾಡಿಗೇರ್
Discussion about this post