ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ಮಹಾನಗರ ವ್ಯಾಪ್ತಿಯಲ್ಲಿ ಸುಮಾರು ಎರಡು ಲಕ್ಷ ಜನರು ಮನೆ ಹೊಂದಿದ್ದು, ಕಂದಾಯ ಪಾವತಿ ಮಾಡುವವರು 1.50 ಲಕ್ಷ ಖಾತೆದಾರರು ಇರಬಹುದು.
ಕಂದಾಯ ಪಾವತಿಸುವ ದಂಡ ರಹಿತವಾಗಿ ಮೇ ಕೊನೆಯ ದಿನಾಂಕವಾಗಿರುತ್ತದೆ. ಆದರೆ, ಇಂತಹ ಸಂದರ್ಭದಲ್ಲಿ ಶಿವಮೊಗ್ಗ ಒನ್ ಕೆಲಸ ನಿರ್ವಹಿಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಮಹಾನಗರ ಪಾಲಿಕೆ ಆವರಣದಲ್ಲಿ ಒಂದೇ ಕೌಂಟರ್ ಇದ್ದು, ಹಣ ಪಾವತಿ ಮಾಡಲು ದಿನಗಟ್ಟಲೆ ಕಾಯಬೇಕಾದ ಸಂದರ್ಭವಿದೆ. ಒಂದು ದಿನ ಚಲನ್ ತೆಗೆದು ನಮೂನೆ 1 ಕೊಳ್ಳಬೇಕು, ಇನ್ನೊಂದು ದಿನ ಹಣ ಪಾವತಿ, ಮತ್ತೊಂದು ದಿನ ಖಾತಾ ನಕಲು ಪಡೆಯಬೇಕಿದೆ. ಇದು ನಮ್ಮ ವ್ಯವಸ್ಥೆ.
ವರದಿ: ಮಂಜುನಾಥ ಶರ್ಮ
Get in Touch With Us info@kalpa.news Whatsapp: 9481252093















