ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಸ್ಯಾಂಡಲ್’ವುಡ್ ಡಿ ಬಾಸ್ ದರ್ಶನ್ ಮಾಡಿರುವ ಆ ಒಂದು ಟ್ವೀಟ್ ಭಾರೀ ಸಂಚಲನ ಮೂಡಿಸಿದ್ದು, ತೀವ್ರ ಕುತೂಲಹ ಹುಟ್ಟು ಹಾಕಿದೆ.
ಇಂದು ಮುಂಜಾನೆಯೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ದರ್ಶನ್, ‘ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ. ನಿಮ್ಮ ದಾಸ ದರ್ಶನ್’ ಎಂದಿದ್ದಾರೆ.
ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ
ನಿಮ್ಮ ದಾಸ ದರ್ಶನ್— Darshan Thoogudeepa (@dasadarshan) July 2, 2019
ಈ ಟ್ವೀಟ್ ಹಿನ್ನೆಲೆಯಲ್ಲಿ ದರ್ಶನ್ ಯಾರಿಗಾದರೂ ಓಪನ್ ಚಾಲೆಂಜ್ ಹಾಕುತ್ತಾರಾ? ಅಥವಾ ಬೇರೆಯವರ ಓಪನ್ ಚಾಲೆಂಜ್ ತೆಗೆದುಕೊಳ್ಳುತ್ತಾರಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

















