ನಮ್ಮ ಶಿವಮೊಗ್ಗದ ಜಿಲ್ಲಾಧಿಕಾರಿ ಶ್ರೀ ದಯಾನಂದ್ ಈಗಾಗಲೇ ತಮ್ಮ ಜನಪರ ಕೆಲಸಗಳಿಂದ ಶಿವಮೊಗ್ಗ ಜನತೆಯ ಮನಸ್ಸನ್ನು ಗೆದ್ದಿದ್ದಾರೆ…… ಅದು ಸಹ್ಯಾದ್ರಿ ಉತ್ಸವವಿರಬಹುದು, ಮತದಾನ ಜಾಗೃತಿ ಇರಬಹುದು….. ಯಾವುದೇ ವಿಷಯವನ್ನು ಮನಸ್ಸಿಟ್ಟು ಕೆಲಸ ಮಾಡುವ ಶ್ರೀ ದಯಾನಂದ್ ಬೇರೆ ಸರ್ಕಾರಿ ಅಧಿಕಾರಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.
ಶಿವಮೊಗ್ಗೆಯಲ್ಲಿ ಮಳೆ ಇಲ್ಲ, ತುಂಗೆ ಬತ್ತಿ ಹೋಗುವ ಸ್ಥಿತಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ಮಳೆ ಆಗದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಕೆಲವರಿಗೆ ಇದರ ಕುರಿತು ಕಳವಳವಿದೆ. ಆದರೆ ಬಹುತೇಕ ಮಂದಿಗೆ ಇದರ ಅರಿವಿಲ್ಲ. ನೀರೆಂಬ ಅಮೃತ ವ್ಯರ್ಥವಾಗಿ ಪೋಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಲಂಗು ಲಗಾಮಿಲ್ಲದೆ ಮುಂದುವರೆದಿದೆ…
ಈ ನಾಜುಕಿನ ಪರಿಸ್ಥಿತಿಯನ್ನು ಮನಗಂಡ ನಮ್ಮ ಜಿಲ್ಲಾಧಿಕಾರಿ ಶ್ರೀ ದಯಾನಂದ್ ಅವರು, ಸಾರ್ವಜನಿಕರಿಗಾಗಿ ಪರಿಸರ ಸ್ನೇಹಿ ಕುಟುಂಬ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಈ ಮೂಲಕ ನೀರಿನ ಕುರಿತಾಗಿ, ಪ್ಲಾಸ್ಟಿಕ್ ಬಳಕೆಯ ಕುರಿತಾಗಿ, ಕಸ-ನೈರ್ಮಲ್ಯದ ಕುರಿತಾಗಿ ಜನರಲ್ಲಿ ದೊಡ್ಡ ಮಟ್ಟದ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದು ನಿಜಕ್ಕೂ ಅಭಿನಂದನೀಯ ಕಾರ್ಯ.
ಸಮಸ್ಯೆಗಳು ಸಹಜ…. ಆದರೆ ಆ ಸಮಸ್ಯೆಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಕಾರ್ಯೋನ್ಮುಖವಾಗಿ ಜನರನ್ನು ಆ ದಿಕ್ಕಿನಲ್ಲಿ ನಡೆಯುವಂತೆ ಪ್ರೇರೇಪಿಸುವವನೇ ನಿಜವಾದ ನಾಯಕ.
ದಯಾನಂದ್ ಸರ್, ನಿಮ್ಮ ಪರಿಸರ ಕಾಳಜಿ ನಮ್ಮ ಮನ ಮುಟ್ಟಿದೆ…. ನಿಮಗೆ ಈ ಪರಿಸರ ಪ್ರೇಮಿಯ ಸಲಾಂ. ನಿಮ್ಮ ಈ ಪ್ರಯತ್ನದಿಂದ ಜನರು ಪರಿಸರವನ್ನು ಗೌರವಿಸುವಂತಾಗಲಿ ಎಂಬುದೇ ನನ್ನ ಆಶಯ.
-ವಿನಯ್ ಶಿವಮೊಗ್ಗ
Discussion about this post