Tuesday, July 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ವಿಜ್ಞಾನ ವಿದ್ಯಾರ್ಥಿಗಳಿಗೆ ಅವಕಾಶಗಳ ಆಗರ: ಏನಿದು ಮಾರ್ನಿಂಗ್ ಟಾಕ್‌ವಿತ್ ಡ್ರೈಫ್ರೂಟ್ಸ್‌?

December 2, 2020
in Special Articles, ತೀರ್ಥಹಳ್ಳಿ
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ರಾಜ್ಯದೆಲ್ಲೆಡೆ ಪ್ರಗತಿ ಆಪಲ್ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ ಹೆಸರು ಕೇಳಿರಲೇಬೇಕು. ರಾಜ್ಯಾದ್ಯಂತ ವಿಜ್ಞಾನ ವಿಭಾಗದ ಪಿಯುಸಿ ಓದುವ ಮಕ್ಕಳಿಗೆ ಹಾಗೂ ಇತರೆ ಎಲ್ಲಾ ಮಕ್ಕಳಿಗೆ, ಯುವಕರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಲವು ಸಾರ್ಥಕ ಸೂಚನೆ ನೀಡುತ್ತಾ, ಸದ್ದು ಮಾಡದೆ ಸೇವೆ ಸಲ್ಲಿಸುತ್ತಿರುವ ವಿಜಯಕುಮಾರ್ ಅವರ ಸಂಸ್ಥೆ ಪ್ರಗತಿ ಆಪಲ್ ಎಜುಕೇಶನ್ ಪ್ರೈ ಲಿ,. ಇಂದು ರಾಜ್ಯದಲ್ಲೇ ವಿಜ್ಞಾನ ವಿಭಾಗದ ಮಕ್ಕಳಿಗೆ ದಾರಿ ಹೇಳಿಕೊಡುವ ಏಕೈಕ ಸಂಸ್ಥೆ ಎಂದು ಹೆಸರಾಗಿದೆ.

ಇಂತಹ ಸಂಸ್ಥೆಯ ರೂವಾರಿ ವಿಜಯ ಕುಮಾರ್ ಬಳಿಗಾರ್ ಹುಟ್ಟಿದ್ದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೊನ್ನತ್ತಿ ಎಂಬ ಚಿಕ್ಕ ಗ್ರಾಮದಲ್ಲಿ. ಶಿಕ್ಷಕ ವಜ್ರಪ್ಪ ಹಾಗೂ ತಾಯಿ ವಿಮಲಮ್ಮ ಅವರ ಪುತ್ರರಾದ ಇವರು ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ವಿಜಯಕುಮಾರ್ ಕಷ್ಟಪಟ್ಟು ಕೆಲಸ ಮಾಡುವುದು, ಹಿಡಿದ ಕೆಲಸವನ್ನು ಅದ್ಭುತವಾಗಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ.

ಬಾಲ್ಯದಿಂದಲೂ ಹೋರಾಟದ ಜೀವನ ರೂಢಿಸಿಕೊಂಡಿರುವ ಅವರು, ನನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದಕ್ಕಿಂತ ಹೆಚ್ಚು ಬಡ, ರೈತರ ಮಕ್ಕಳನ್ನು, ಓದುವ ಮಕ್ಕಳನ್ನು ಪ್ರೀತಿಸುತ್ತಾರೆ. ಇದು ಅವರ ಕಳೆದ 10 ವರ್ಷಗಳ ಅವಧಿಯಲ್ಲಿನ ಕಾರ್ಯವೈಖರಿಯಿಂದಲೇ ಬೆಳಕಿಗೆ ಬರುತ್ತದೆ.

ವಿಜಯಕುಮಾರ್ ಅವರ ದೊಡ್ಡ ಕನಸು ಪ್ರಗತಿ ಆಪಲ್ ಸಂಸ್ಥೆ. ಮಕ್ಕಳಿಗೆ, ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾರ್ಗ ದರ್ಶನ ಮಾಡುವ ಕೆಲಸ ಎಂದರೆ ವಿಜಯ್ ಕುಮಾರ್‌ಗೆ ಅಚ್ಚುಮೆಚ್ಚು. ದಿನದ 18 ಗಂಟೆಗೂ ಹೆಚ್ಚು ಕಾಲ ಇದೇ ಕಾಯ ಕಲ್ಪ ಮಾಡಿಕೊಂಡು ಬಂದಿರುವ ಅವರು ಮೊದಲು ಧಾರವಾಡದದಲ್ಲಿ ತರಬೇತಿ ಕೇಂದ್ರ ಆರಂಭಿಸಿ ನೂರಾರು ಮಕ್ಕಳಿಗೆ ತರಬೇತಿ ನೀಡಿದ್ದಾರೆ. ಅವರಲ್ಲಿ ಸಾಕಷ್ಟು ಜನ ಒಳ್ಳೆಯ ಉದ್ಯೋಗದಲ್ಲಿದ್ದಾರೆ ಎಂಬುದು ಹಿರಿಮೆಯ ವಿಷಯ.

ಪ್ರಸಕ್ತ ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿ ಕಚೇರಿ ಮೂಲಕ ರಾಜ್ಯಾದ್ಯಂತ ಸಾವಿರಾರು ಮಕ್ಕಳಿಗೆ, ಯುವಕರಿಗೆ ತರಬೇತಿ, ಮಾರ್ಗದರ್ಶನ ಕೊಡುತ್ತಿದ್ದಾರೆ. ವಿಶೇಷವಾಗಿ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕವಾದ ಹೊಸ ಕಲಿಕೆಗೆ ಅವಕಾಶ ಮಾಡಿಕೊಡುವ ಕಾಯಕಲ್ಪದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನೂರಾರು ಜನರಿಗೆ ಉದ್ಯೋಗ ನೀಡುವ ಜೊತೆಗೆ ನಮ್ಮ ರಾಜ್ಯದ ಲ್ಲಿಯೂ ವಿಜ್ಞಾನ ಕಲಿಕೆಯ ಪ್ರಗತಿ ಸಾಧಿಸಲು ಹಠ ತೊಟ್ಟಿದ್ದಾರೆ.

ಪತ್ರಿಕೋದ್ಯಮದಲ್ಲಿ ಪಿಜಿ ವ್ಯಾಸಾಂಗ ಮುಗಿಸಿರುವ ಅವರು, ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಜಾವಾಣಿ, ಕನ್ನಡಪ್ರಭ, ಜನಶ್ರೀ ಟಿವಿ ಹಾಗೂ ವಿಜಯವಾಣಿಯಲ್ಲಿ ವರದಿಗಾರರಾಗಿ ಕೆಲಸ ಮಾಡಿರುವ ವಿಜಯಕುಮಾರ್ ಪತ್ರಿಕೋದ್ಯಮದಲ್ಲಿ ಆಯ್ಕೆಮಾಡಿಕೊಂಡ ವಿಷಯ ಶಿಕ್ಷಣ ವರದಿಗಳ ಆಧಾರದಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಮನಮುಟ್ಟುವಂತೆ ಯುವಕರಿಗೆ, ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕಾರ್ಯಕ್ರಮವನ್ನು ನೀಡಿದ ಹಿರಿಮೆ ಹೊಂದಿದ್ದಾರೆ.

ವಿಜಯಕುಮಾರ್ ಈಗಲೂ ಮೊಬೈಲ್ ಮೂಲಕ ರಾಜ್ಯದ ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪಾಠಮಾಡುವ ತಂಡವನ್ನು ಕಟ್ಟಿಕೊಂಡಿದ್ದಾರೆ. ಪ್ರಗತಿ ಆಪಲ್ ಎಜುಕೇಷನ್ ಎಂಬ ಹೆಸರಿನ ಸಂಸ್ಥೆ ಆರಂಭಿಸಿರುವ ವಿಜಯ್ ಕುಮಾರ್‌ಗೆ ಯಾವುದೇ ವೈಯಕ್ತಿಕ ಅಭಿಲಾಷೆಗಳು, ಸ್ವಾರ್ಥ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಇದು ಅವರ ಮುಕ್ತ ಮಾತುಗಳಿಂದಲೇ ಅರ್ಥವಾಗುತ್ತದೆ.


ರಾಜ್ಯದ ಪಿಯು ವಿಜ್ಞಾನ ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಳ್ಳುತ್ತಿಲ್ಲ ಎಂಬ ಉದ್ದೇಶದಿಂದಲೇ ಆರಂಭಿಸಿದ ಈ ಸಂಸ್ಥೆ ಈಗ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ತನ್ನದೇ ಆದ ಬಳಗವನ್ನು ಹೊಂದಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾವೇರಿ, ಮೈಸೂರು ಸೇರಿದಂತೆ ರಾಜ್ಯದ ಹಲವೆಡೆ ನೂರಾರು ಮಕ್ಕಳಿಗೆ ಕಲಿಕೆಯ ಹಂತಗಳನ್ನು ತಿಳಿಸಿಕೊಡುವ, ಬಿಡಿಸಿ ಹೇಳುವ, ಅರ್ಜಿ ಹಾಕುವ ಕಾಯಕವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾಡುತ್ತಿದೆ.

ಕಳೆದ ಒಂಬತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ಈಗ ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿ ಮುಖ್ಯ ಕಚೇರಿಯ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಅವರು ಆಯ್ಕೆ ಮಾಡಿಕೊಳ್ಳಬಹುದಾದ ವಿಷಯ, ವಸ್ತುಸ್ಥಿತಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೆಯೇ ಅರ್ಜಿಗಳನ್ನು ಭರ್ತಿ ಮಾಡುವ ವಿಧಾನದ ಎಲ್ಲಾ ಮಾಹಿತಿಗಳನ್ನು ಒಂದೇ ನೆಲೆಗಟ್ಟಿನಲ್ಲಿ ಸಿದ್ಧಪಡಿಸಿಕೊಡುವ ಅಪ್ಲಿಕೇಷನ್ ಟು ಆಡ್ಮಿಷನ್ ಸೇವೆ ಆರಂಭಿಸಿದ್ದಾರೆ. ಪಿಯುಸಿಯಲ್ಲಿ ಬರೆಯಬಹುದಾದ ಎಲ್ಲ ಪರೀಕ್ಷೆಗಳ ಮಾಹಿತಿ ಹಾಗೂ ಅದಕ್ಕೆ ಪೂರಕವಾದ ಸೇವೆಯನ್ನು ನೀಡುತ್ತಿರುವ ಸಂಸ್ಥೆ ಒಂದು ಸಲ ವಿದ್ಯಾರ್ಥಿಯೊಬ್ಬ ದಾಖಲೆಗಳನ್ನು ನೀಡಿದರೆ ಸಾಕು ಪದೇ ಪದೇ ಅಲೆದಾಡುವ ಅವಕಾಶವಿಲ್ಲದಂತೆ ಅವರಿಗೆ ಅಗತ್ಯವಿರುವ ಎಲ್ಲಾ ಮಾಹಿತಿ ಸೇವೆಯನ್ನು ಒದಗಿಸುತ್ತಿದೆ.

ಯುವಕರ ಭವಿಷ್ಯದ ಮಾರ್ಗದರ್ಶನ ನೀಡುವ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ಸಿಇಟಿ, ನೀಟ್, ಜೆಇಇ ಪರೀಕ್ಷೆಗಳಿಗೆ ಅನುಭವಿ ಅಧ್ಯಾಪಕರಿಂದ ಸಪೋರ್ಟ್ ವಿಡಿಯೋ ಪಾಠಗಳನ್ನು ನೀಡುವ ವಿಜಯಕುಮಾರ್ ಎಂತಹದೇ ಸಮಸ್ಯೆಗಳಿದ್ದರೂ ತಕ್ಷಣ ಸ್ಪಂದಿಸಿ ಅವುಗಳಿಗೆ ಪರಿಹಾರ ಹುಡುಕಿ ಕೊಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಪೋಷಕರುಗಳಿಗೆ ಮಕ್ಕಳು ವಿಜ್ಞಾನ ಓದಬೇಕು ಎಂಬ ಅಭಿಲಾಷೆ ಹೆಚ್ಚಾಗಿರುತ್ತದೆ. ಅದು ಎಂಜಿನಿಯರಿಂಗ್ ಇಲ್ಲವೇ ಮೆಡಿಕಲ್‌ಗೆ ಮಾತ್ರ ಸೀಮಿತ ಆಗಿರುವುದನ್ನು ವಿಜಯಕುಮಾರ್ ಒಪ್ಪಿಕೊಳ್ಳುವುದಿಲ್ಲ. ವಿಜ್ಞಾನ ಜಗತ್ತಿನ ಅವಕಾಶಗಳ ಬಗ್ಗೆ ತಿಳಿದುಕೊಳ್ಳುವ ಒಂದು ಸಣ್ಣ ಪ್ರಯತ್ನ ಮಾಡಿದರೆ ಮಕ್ಕಳನ್ನು ಏಕೆ ವಿಜ್ಞಾನ ಓದಿಸಬೇಕು ಅಲ್ಲಿ ದೊರಕುವ ಅತ್ಯುತ್ತಮ ಸೇವೆಗಳು ಯಾವ್ಯಾವು ಎಂಬುದನ್ನು ಅರಿತುಕೊಳ್ಳಬಹುದು ಎನ್ನುತ್ತಾರೆ.

ನಾನು ನನಗಾಗಿ ಯೋಚನೆ ಮಾಡುವುದಿಲ್ಲ ನೀವು ಖರ್ಚು ಮಾಡುವ ಲಕ್ಷಾಂತರ ಮೊತ್ತದಲ್ಲಿ ನಿತ್ಯ ಹತ್ತು ರೂಪಾಯಿ ಬಂಡವಾಳ ಹಾಕಲು ನಿಮ್ಮಿಂದ ಸಾಧ್ಯವಾದರೆ ನಿಮ್ಮ ಮನೆ ಬಾಗಿಲಿಗೆ ಬಂದು ನಾನು ಸೇವೆ ನೀಡಬಲ್ಲೆ ಎಂದು ಹೇಳುವ ವಿಜಯಕುಮಾರ್, ದಾವಣಗೆರೆ ಹಾಗೂ ಶಿವಮೊಗ್ಗದಲ್ಲಿ ಸುಸಜ್ಜಿತ ಕಟ್ಟಡವನ್ನು ಎಲ್ಲ ಸ್ನೇಹಿತರ, ಇಲ್ಲಿ ಕಲಿತ ಸಾವಿರಾರು ಮಕ್ಕಳ ಪೋಷಕರ ಜೊತೆ ಸೇರಿ ನಿರ್ಮಿಸಲು ನಿರ್ಧರಿಸಿದ್ದಾರೆ. ಹಿನ್ನೆಲೆಯಲ್ಲಿ ವಿಜಯಕುಮಾರ್ ಮಾರ್ನಿಂಗ್ ಟಾಕ್ ವಿತ್ ಡ್ರೈಫ್ರೂಟ್ ಹೆಸರಿನಲ್ಲಿ ಶಿವಮೊಗ್ಗ ಸೇರಿದಂತೆ ರಾಜ್ಯದೆಲ್ಲೆಡೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ನಾನು ನನಗಾಗಿ ಯೋಚನೆ ಮಾಡುವುದಿಲ್ಲ ನೀವು ಖರ್ಚು ಮಾಡುವ ಲಕ್ಷಾಂತರ ಮೊತ್ತದಲ್ಲಿ ನಿತ್ಯ ಹತ್ತು ರೂಪಾಯಿ ಬಂಡವಾಳ ಹಾಕಲು ನಿಮ್ಮಿಂದ ಸಾಧ್ಯವಾದರೆ ನಿಮ್ಮ ಮನೆ ಬಾಗಿಲಿಗೆ ಬಂದು ನಾನು ಸೇವೆ ನೀಡಬಲ್ಲೆ. -ವಿಜಯಕುಮಾರ್

ಸಮಯಕ್ಕೆ ಎಲ್ಲಿಲ್ಲದ ಗೌರವ ನೀಡುತ್ತಿರುವ ನಮ್ಮ ನಡುವಿನ ಮುಕ್ತ ಮನಸ್ಸುಗಳನ್ನು ಸೇರಿಸಿಕೊಂಡು ಬೆಳಿಗ್ಗೆ 8.30 ರಿಂದ ಹತ್ತರವರೆಗೆ ನಿರ್ದಿಷ್ಟ ಸಮಯದ ಕೇವಲ ಒಂದೂವರೆ ಗಂಟೆಗಳ ಕಾಲ ಮಗುವಿನ ಬೆಳವಣಿಗೆಗೆ ಪೂರಕವಾಗಿ ಪ್ರಗತಿ ಸಂಸ್ಥೆ ನಡೆಸುತ್ತಿರುವ ಕಾರ್ಯಕ್ರಮಗಳನ್ನು ಹೇಳುವ ಜೊತೆಗೆ ದೇಶವಿದೇಶಗಳ ಆರೋಗ್ಯಕರ ಡ್ರೈಫ್ರೂಟ್ಸ್‌ಗಳನ್ನು ನೀಡುವ ಮೂಲಕ ಅತ್ಯಂತ ಮುಕ್ತವಾಗಿ ತಮ್ಮ ಮನದ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ.

ವಿಜಯಕುಮಾರ್ ಅವರ ಈ ಪ್ರಯತ್ನ ಯಶಸ್ವಿಯಾಗಲಿ. ಹೊಸ ಕಚೇರಿಗಳ ಮೂಲಕ ನೂರಾರು ಜನರಿಗೆ ಉದ್ಯೊಗ ನೀಡುವ ಬಹುದೊಡ್ಡ ಕನಸ್ಸನ್ನು ಹೊಂದಿರುವ ಅವರ ಸದುದ್ದೇಶದ ಯೋಜನೆಗೆ ನಾವುಗಳು ಬೆಂಗಾವಲಾಗಿ ನಿಲ್ಲೋಣ. ವಿಜಯ್‌ಕುಮಾರ್ ಅವರ ಕನಸ್ಸಿನ ಜೊತೆ ಕೈಜೋಡಿಸೋಣ. ನಮ್ಮ ರಾಜ್ಯದ ಬಹುತೇಕ ಮಕ್ಕಳು ವಿಜ್ಞಾನದ ಜಗತ್ತಿನೊಳಗೆ ರಾರಾಜಿಸಲಿ. ಈ ಬಗ್ಗೆ ವಿವರಗಳಿಗೆ ಒಮ್ಮೆ ಮುಕ್ತವಾಗಿ ಮಾತನಾಡಿ ಅವರ ಸವಿಗನಸಿನ ಚಿಂತನೆಗೆ ಸ್ಪಂದಿಸಿ.

ವಿವರಗಳಿಗೆ 7899884600, 8792563600, 8050535600, 9980438600 ಗೆ ಸಂಪರ್ಕಿಸಿ.

ಪ್ರಗತಿ ಆಪಲ್ ಎಜುಕೇಶನ್ ಸಂಸ್ಥೆಯ ಕನಸಿಗೆ ಕೈ ಜೋಡಿಸಿ
ಕರ್ನಾಟಕ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ನಂತರ ವಿಜ್ಙಾನ ವಿಷಯದಲ್ಲಿ ಕಲಿಕೆ ಆರಂಭಿಸುವ ಮಕ್ಕಳ ಪೋಷಕರು ಒಮ್ಮೆ ಪ್ರಗತಿ ಆಪಲ್ ಎಜುಕೇಷನ್ ಸಂಸ್ಥೆಯ ಜೊತೆ ಕೈ ಜೋಡಿಸಿದರೆ ಸಾಕು. ಆ ಮಗುವಿನ ನಂತರದ ಎಲ್ಲಾ ಕಲಿಕೆಗೆ ಪೂರಕವಾಗಿ ಸ್ಪಂದಿಸುತ್ತಾ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ತುಂಬಿಕೊಡುವ ಕಾರ್ಯದಿಂದ ತರಬೇತಿ ನೀಡುವ ಕಾರ್ಯದ ಹೊಣೆಗಾರಿಕೆಯನ್ನು ಸಂಸ್ಥೆ ಹೊರುತ್ತದೆ.

ನೂರಾರು ಜನರಿಗೆ ಉದ್ಯೋಗ ನೀಡುವ ಜೊತೆಗೆ ರಾಜ್ಯದ ವಿಜ್ಞಾನ ಪ್ರತಿಭೆಗಳಿಗೆ ಪೂರಕ ವೇದಿಕೆಯನ್ನು ಕಲ್ಪಿಸಿಕೊಡುತ್ತಿರುವ ವಿಜಯ್‌ಕುಮಾರ್ ಅವರ ಕನಸಿನ ಪ್ರಗತಿ ಆಪಲ್ ಎಜುಕೇಷನ್ ಸಂಸ್ಥೆ ರಾಜ್ಯದಾದ್ಯಂತ ತನ್ನದೇ ಬಳಗವನ್ನು ಹೊಂದಿ ಸಾವಿರಾರು ಮಕ್ಕಳಿಗೆ ಹೊಸ ಹೊಸ ಆಲೋಚನೆಗಳನ್ನು ತುಂಬಿ ಅವರ ಭವಿಷ್ಯದ ಬದುಕು ಉಜ್ವಲಗೊಳ್ಳುವಂತೆ ಮಾಡಿದೆ ಹಾಗೂ ಮಾಡುತ್ತದೆ. ಮಕ್ಕಳಿಗಾಗಿ ಅದರಲ್ಲೂ ಬಡ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ನಿತ್ಯದ ಬಹುತೇಕ ಸಮಯವನ್ನು ಮೀಸಲಿಟ್ಟಿರುವ ವಿಜಯ್‌ಕುಮಾರ್ ಬಳಿಗಾರ್ ಅವರ ತಂಡದ ಈ ಪ್ರಯತ್ನಕ್ಕೆ ಕೈಜೋಡಿಸೋಣ.

(ಲೇಖನ: ಎಸ್.ಕೆ. ಗಜೇಂದ್ರ ಸ್ವಾಮಿ, ಹಿರಿಯ ಪತ್ರಕರ್ತರು)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Dry FruitsEducation NewsKannada News WebsiteLatest News KannadaLocal NewsMalnad NewsPragathi Apple Education AgencyShimogaShivamoggaShivamogga Newsಪ್ರಗತಿ ಆಪಲ್ ಎಜುಕೇಶನ್ ಸಂಸ್ಥೆ
Previous Post

ಬಿಜೆಪಿ ಅವಧಿಯಲ್ಲಿ ಮಾಚೇನಹಳ್ಳಿ ಕೈಗಾರಿಕಾ ವಲಯ ಉತ್ತುಂಗಕ್ಕೆ: ರುದ್ರೇಗೌಡ

Next Post

ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಶುಲ್ಕದಲ್ಲಿ ಸುಲಿಗೆ: ಕುವೆಂಪು ವಿವಿ ವಿರುದ್ಧ ಯುವ ಕಾಂಗ್ರೆಸ್ ಆರೋಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಶುಲ್ಕದಲ್ಲಿ ಸುಲಿಗೆ: ಕುವೆಂಪು ವಿವಿ ವಿರುದ್ಧ ಯುವ ಕಾಂಗ್ರೆಸ್ ಆರೋಪ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

India Powers Global Festivities as the World celebrates International Kho Kho Day

July 1, 2025

ಬೆಂಗಳೂರು | ಜುಲೈ 4ರವರೆಗೆ ವಿಶೇಷ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು

July 1, 2025

ರೈಲ್ವೆ ಪ್ರಯಾಣಿಕರೇ ಗಮನಿಸಿ! ರಿಸರ್ವೇಷನ್ ಟೈಮ್ ಕುರಿತಾಗಿ ಇಲಾಖೆ ಕೊಟ್ಟಿದೆ ಬಿಗ್ ಅಪ್ಡೇಟ್

July 1, 2025

ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್ | ಫ್ಯಾನ್ಸ್ ಫುಲ್ ಖುಷ್

June 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

India Powers Global Festivities as the World celebrates International Kho Kho Day

July 1, 2025

ಬೆಂಗಳೂರು | ಜುಲೈ 4ರವರೆಗೆ ವಿಶೇಷ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು

July 1, 2025

ರೈಲ್ವೆ ಪ್ರಯಾಣಿಕರೇ ಗಮನಿಸಿ! ರಿಸರ್ವೇಷನ್ ಟೈಮ್ ಕುರಿತಾಗಿ ಇಲಾಖೆ ಕೊಟ್ಟಿದೆ ಬಿಗ್ ಅಪ್ಡೇಟ್

July 1, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!